ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ವಿರುದ್ಧ ಕೇಸು ದಾಖಲು

ಬುಧವಾರ, 6 ಫೆಬ್ರವರಿ 2019 (09:40 IST)
ಮುಂಬೈ: ಮಹಿಳೆಯರ ಬಗ್ಗೆ ಖಾಸಗಿ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ವಿರುದ್ಧ ಪ್ರಕರಣ ದಾಖಲಾಗಿದೆ.


ಇದೀಗ ಜೋಧ್ ಪುರದ ಪೊಲೀಸ್ ಠಾಣೆಯೊಂದರಲ್ಲಿ ಇಬ್ಬರು ಕ್ರಿಕೆಟಿಗರು ಮತ್ತು ಶೋ ನಿರೂಪಕ ಕರಣ್ ಜೋಹರ್ ವಿರುದ್ಧ ಕೇಸು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇಬ್ಬರು ಕ್ರಿಕೆಟಿಗರ ಮೇಲೆ ನಿಷೇಧ ಹೇರಿ ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆಗೆ ದಿನ ನಿಗದಿಯಾದ ಬಳಿಕ ನಿಷೇಧ ಹಿಂಪಡೆದಿತ್ತು.

ಸದ್ಯಕ್ಕೆ ಪಾಂಡ್ಯ ಟೀಂ ಇಂಡಿಯಾ ಪರ ನ್ಯೂಜಿಲೆಂಡ್ ನಲ್ಲಿ ಟಿ20 ಸರಣಿ ಆಡುತ್ತಿದ್ದರೆ, ಕೆಎಲ್ ರಾಹುಲ್ ಭಾರತ ಎ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿರುವುದರಿಂದ ಕ್ರಿಕೆಟಿಗರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್ ಕೊಹ್ಲಿಯನ್ನು ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್ ಗೆ ಹೋಲಿಸಿದ ಕೋಚ್ ರವಿಶಾಸ್ತ್ರಿ!