Publish Date: Sun, 27 Jan 2019 (09:17 IST)
Updated Date: Sun, 27 Jan 2019 (09:19 IST)
ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದಕ್ಕೆ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ರನ್ನು ದಿಡೀರ್ ಆಗಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಕಾರಣವೇನೆಂದು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಸ್ಪಷ್ಪನೆ ನೀಡಿದ್ದಾರೆ.
ಹಾರ್ದಿಕ್ ಮತ್ತು ರಾಹುಲ್ ಮೇಲಿನ ನಿಷೇಧ ತೆರವುಗೊಳಿಸಿದ್ದಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇವರ ವಿಚಾರಣೆ ಮುಗಿಯುವವರೆಗೂ ನಿಷೇಧ ಹಿಂಪಡೆದಿದ್ದೇಕೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದರು.
ಇದೀಗ ಈ ಪ್ರಶ್ನೆಗೆ ಉತ್ತರಿಸಿರುವ ವಿನೋದ್ ರಾಯ್ ‘ನಿಷೇಧ ಹಿಂಪಡೆಯಲು ಎರಡು ಕಾರಣಗಳಿವೆ. ಒಂದು ಈ ಪ್ರಕರಣವೇ ಅನಿಶ್ಚಿತತೆಯಲ್ಲಿದೆ. ಇನ್ನೊಂದು ಈ ಪ್ರಕರಣ ತಂಡದ ಮನೋಬಲದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು. ಈ ಕಾರಣಕ್ಕೆ ನಿಷೇಧ ಹಿಂಪಡೆಯಲು ನಿರ್ಧರಿಸಿದೆವು’ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ