Publish Date: Sat, 26 Jan 2019 (09:02 IST)
Updated Date: Sat, 26 Jan 2019 (09:03 IST)
ಮುಂಬೈ: ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರರು ಅಷ್ಟು ಭೇಗ ತಮ್ಮ ಕ್ಲಾಸ್, ಫಾರ್ಮ್ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಟೀಂ ಇಂಡಿಯಾದ ಅನೇಕ ಯುವ ಆಟಗಾರರು ಈಗಾಗಲೇ ನಿರೂಪಿಸಿದ್ದಾರೆ.
ಇದೀಗ ಫಾರ್ಮ್ ಕಳೆದುಕೊಂಡಿರುವ, ನಿಷೇಧ ಶಿಕ್ಷ ಮುಗಿಸಿ ಮಾನಸಿಕವಾಗಿ ಕುಗ್ಗಿರುವ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದು, ಇಂಗ್ಲೆಂಡ್ ಲಯನ್ಸ್ ಪರ ಆಡಲಿದ್ದಾರೆ.
ಈ ಮೂಲಕ ಭಾರತ ಎ ತಂಡದ ಕೋಚ್ ಆಗಿರುವ ಗುರು ರಾಹುಲ್ ದ್ರಾವಿಡ್ ಗರಡಿಯಲ್ಲಿ ಟ್ರೈನಿಂಗ್ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ಗೆ ನಿಷೇಧ ಶಿಕ್ಷೆಯಾಗಿದ್ದಾಗ ದ್ರಾವಿಡ್ ಈ ಆಟಗಾರರ ಪರವಾಗಿ ಮಾತನಾಡಿದ್ದರು. ಇವರಿಗೆ ಸರಿಯಾದ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದಿದ್ದರು. ಇದೀಗ ಹಾರ್ದಿಕ್ ನೇರವಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾದರೆ, ಫಾರ್ಮ್ ಕಳೆದುಕೊಂಡಿರುವ ರಾಹುಲ್ ದ್ರಾವಿಡ್ ರ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದುಕೊಂಡಿರುವ ಫಾರ್ಮ್ ಕಂಡುಕೊಳ್ಳಲು ರಾಹುಲ್ ಗೆ ಇದಕ್ಕಿಂತ ಸುವರ್ಣಾವಕಾಶ ಇನ್ನೊಂದು ಸಿಗದು. ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕೆಎಲ್ ರಾಹುಲ್ ರನ್ನು ದ್ರಾವಿಡ್ ಸಿದ್ಧ ಮಾಡಿ ಕಳುಹಿಸುತ್ತಾರಾ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ