Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ಔಟ್ ಮಾಡಲು ಖೆಡ್ಡಾ ತೋಡಿದ್ದ ಧೋನಿ!

ಧೋನಿ
ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ ಮನ್ ಟ್ರೆಂಟ್ ಬೌಲ್ಟ್ ರನ್ನು ಔಟ್ ಮಾಡಲು ಧೋನಿ ಹೆಣೆದ ತಂತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಓವರ್ ದಿ ವಿಕೆಟ್ ಮಾಡಲು ಹೊರಟ ಕುಲದೀಪ್ ಯಾದವ್ ರನ್ನು ತಡೆದ ಧೋನಿ ‘ಬೇಡ ಹಾಗೆ ಮಾಡಿದರೆ ಕಣ್ಣು ಮುಚ್ಚಿ ತಡೆಯುತ್ತಾನೆ. ರೌಂಡ್ ದಿ ವಿಕೆಟ್ ಬಾಲ್ ಮಾಡು’ ಎಂದು ಹೇಳುವುದು ಸ್ಟಂಪ್ ಮೈಕ್ರೋಫೋನ್ ನಲ್ಲಿ ಸೆರೆಯಾಗಿದೆ.

ಧೋನಿ ಹೇಳಿದಂತೇ ಕುಲದೀಪ್ ಮುಂದಿನ ಎಸೆತವನ್ನು ಎಸೆಯುತ್ತಾರೆ. ಅಷ್ಟೇ ಅಲ್ಲದೆ, ಬಾಲ್ ಸ್ವಲ್ಪ ಒಳ ಮುಖವಾಗಿ ಬರುತ್ತದೆ. ಇದನ್ನು ಸರಿಯಾಗಿ ತಡೆಯಲು ಸಾಧ್ಯವಾಗದ ಬೌಲ್ಟ್ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಾಗೆ ಸಿಂಪಲ್ ಕ್ಯಾಚಿತ್ತು ಹೊರನಡೆಯುತ್ತಾರೆ. ಅಲ್ಲಿಗೆ ಧೋನಿ ಪ್ಲ್ಯಾನ್ ವರ್ಕೌಟ್ ಆಗುತ್ತದೆ. ಧೋನಿಯ ಈ ಚಾಣಕ್ಷ್ಯ ನೀತಿಯನ್ನು ಇದೀಗ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಸೂರ್ಯ ಅಡ್ಡಿಯಾಗಲು ನಿಜ ಕಾರಣವೇನು ಗೊತ್ತಾ?