Select Your Language

Notifications

webdunia
webdunia
webdunia
Thursday, 10 April 2025
webdunia

ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಸೂರ್ಯ ಅಡ್ಡಿಯಾಗಲು ನಿಜ ಕಾರಣವೇನು ಗೊತ್ತಾ?

ಭಾರತ-ನ್ಯೂಜಿಲೆಂಡ್ ಏಕದಿನ
ನೇಪಿಯರ್ , ಗುರುವಾರ, 24 ಜನವರಿ 2019 (09:22 IST)
ನೇಪಿಯರ್: ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳು ಮಳೆ, ಮಂದ ಬೆಳಕಿನ ಕಾರಣದಿಂದ ನಿಲ್ಲುತ್ತವೆ. ಆದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಸೂರ್ಯನ ಬಿಸಿಲಿನಿಂದಾಗಿ ನಿಂತಿತು.


ಊಟದ ವಿರಾಮದ ಬಳಿಕ ಭಾರತ ಎರಡನೇ ಓವರ್ ಆಡುವಷ್ಟರಲ್ಲಿ ಶಿಖರ್ ಧವನ್ ಬಿಸಿಲಿನ ಝಳಕ್ಕೆ ಬಾಲ್ ಕಾಣಿಸುತ್ತಿಲ್ಲ ಎಂದು ಅಂಪಾಯರ್ ಗೆ ದೂರಿತ್ತರು. ಇದರಿಂದಾಗಿ ಅಂಪಾಯರ್ ಗಳು ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲು ತೀರ್ಮಾನಿಸಿದರು.

ಆ ಸಮಯದಲ್ಲಿ ಬ್ಯಾಟ್ಸ್ ಮನ್ ನ ಕಣ್ಣಿಗೆ ನೇರವಾಗಿ ಸೂರ್ಯನ ಪ್ರಖರ ಬೆಳಕು ಬೀಳುತ್ತಿತ್ತು. ಇದರಿಂದಾಗಿ ಚೆಂಡು ಕಾಣಿಸುತ್ತಿರಲಿಲ್ಲ. ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಪಿಚ್ ನ್ನು ಉತ್ತರ-ದಕ್ಷಿಣ ಅಭಿಮುಖವಾಗಿ ನಿರ್ಮಿಸಲಾಗುತ್ತದೆ. ಇದರಿಂದ ಎಷ್ಟೇ ಸೂರ್ಯನ ಬೆಳಕಿದ್ದರೂ ಬ್ಯಾಟ್ಸ್ ಮನ್ ಗಳಿಗೆ ತೊಂದರೆಯಾಗುವುದಿಲ್ಲ. ಆದರೆ ನೇಪಿಯರ್ ಅಂಗಣದಲ್ಲಿ ಪೂರ್ವ-ಪಶ್ಚಿಮಾಭಿಮುಖವಾಗಿ ಪಿಚ್ ನಿರ್ಮಿಸಿದ್ದೇ ಈ ಅವಾಂತರಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಗೆದ್ದ ಟೀಂ ಇಂಡಿಯಾ