Publish Date: Sat, 26 Jan 2019 (09:12 IST)
Updated Date: Sat, 26 Jan 2019 (09:13 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಕಾಮೆಂಟ್ ಮಾಡುವಾಗ ತಪ್ಪು ಮಾಡಿ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಗೆ ನಿರೂಪಕ ಕರಣ್ ಜೋಹರ್ ಕ್ಷಮೆ ಕೇಳಿದ್ದರಂತೆ.
ಘಟನೆ ಬಳಿಕ ತೀವ್ರ ನೊಂದಿದ್ದ ತಾನು ಇಬ್ಬರೂ ಕ್ರಿಕೆಟಿಗರಿಗೆ ಮೊಬೈಲ್ ಮೆಸೇಜ್ ಮಾಡಿದ್ದು ನನ್ನಿಂದಾಗಿ ನೀವು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವಂತಾಯಿತು ಎಂದು ಸಾರಿ ಹೇಳಿದ್ದರಂತೆ.
ಆದರೆ ಇಬ್ಬರೂ ಇದಕ್ಕೆ ಪ್ರತಿಕ್ರಿಯಿಸಿ ‘ಇದು ನಿಮ್ಮ ತಪ್ಪಲ್ಲ’ ಎಂದು ಸಮಾಧಾನಪಡಿಸಿದ್ದರಂತೆ. ಇದೀಗ ಇಬ್ಬರೂ ಕ್ರಿಕೆಟಿಗರ ಮೇಲಿನ ನಿಷೇಧ ತೆರವಾಗಿದ್ದು, ಕರಣ್ ಜೋಹರ್ ನಿರಾಳತೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ತಮ್ಮ ಶೋನಲ್ಲಿ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ