Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಕಳೆದುಕೊಂಡಿದ್ದನ್ನು ಎ ತಂಡದಲ್ಲಿ ಕಂಡುಕೊಂಡ ಕೆಎಲ್ ರಾಹುಲ್

ಟೀಂ ಇಂಡಿಯಾದಲ್ಲಿ ಕಳೆದುಕೊಂಡಿದ್ದನ್ನು ಎ ತಂಡದಲ್ಲಿ ಕಂಡುಕೊಂಡ ಕೆಎಲ್ ರಾಹುಲ್
ಮುಂಬೈ , ಬುಧವಾರ, 30 ಜನವರಿ 2019 (09:28 IST)
ಮುಂಬೈ: ಮಹಿಳೆಯ ರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಟೀಂ ಇಂಡಿಯಾದಿಂದ ಕೆಲವು ದಿನ ನಿಷೇಧಕ್ಕೊಳಗಾಗಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಇದೀಗ ಭಾರತ ಎ ತಂಡದ ಪರ ಆಡುತ್ತಿದ್ದಾರೆ.


ನಿಷೇಧ ತೆರವುಗೊಂಡ ಬಳಿಕ ಭಾರತ ಎ ತಂಡವನ್ನು ಕೂಡಿಕೊಂಡ ಕೆಎಲ್ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ 77 ಬಾಲ್ ಎದುರಿಸಿ 42 ರನ್ ಗಳಿಸಿದರು.

ಈ ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಕೂಡಾ ಆಡಿದ್ದು, ಅಜೇಯ 73 ರನ್ ಗಳಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಇದು ಅನಧಿಕೃತ ಪಂದ್ಯವಾಗಿದ್ದರೂ ಟೀಂ ಇಂಡಿಯಾದಲ್ಲಿ ಫಾರ್ಮ್ ಕಳೆದುಕೊಂಡು ವ್ಯಾಪಕ ಟೀಕೆಗೊಳಗಾಗಿದ್ದ ರಾಹುಲ್ ಮರಳಿ ಲಯ ಕಂಡುಕೊಳ್ಳಲು ಉತ್ತಮ ವೇದಿಕೆಯಾಗಿದೆ. ಮೊದಲ ಪಂದ್ಯದಲ್ಲಿ ಅವರು ವಿಫಲರಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಸಮಾಧಾನಕರ ಬ್ಯಾಟಿಂಗ್ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಚೀಟ್ ಮಾಡಿ ಗೆದ್ದ ಮೇಲೆಯೂ ಹೆಮ್ಮೆಪಡುವುದೇಕೆ? ಸೌರಾಷ್ಟ್ರ ನಾಯಕನಿಗೆ ಟ್ರೋಲ್ ಮಾಡಿದ ಕರ್ನಾಟಕ ಅಭಿಮಾನಿಗಳು