Select Your Language

Notifications

webdunia
webdunia
webdunia
webdunia

ಚೀಟ್ ಮಾಡಿ ಗೆದ್ದ ಮೇಲೆಯೂ ಹೆಮ್ಮೆಪಡುವುದೇಕೆ? ಸೌರಾಷ್ಟ್ರ ನಾಯಕನಿಗೆ ಟ್ರೋಲ್ ಮಾಡಿದ ಕರ್ನಾಟಕ ಅಭಿಮಾನಿಗಳು

ರಣಜಿ ಟ್ರೋಫಿ ಕ್ರಿಕೆಟ್
ಬೆಂಗಳೂರು , ಬುಧವಾರ, 30 ಜನವರಿ 2019 (09:22 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ವಿರುದ್ಧ ನಡೆದಿದ್ದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಸೆಲ್ಫೀ ತೆಗೆದು ಟ್ವೀಟ್ ಮಾಡಿದ್ದ ನಾಯಕ ಜಯದೇವ್ ಉನಾದ್ಕಟ್ ಟ್ರೋಲ್ ಗೊಳಗಾಗಿದ್ದಾರೆ.


ಚೇತೇಶ್ವರ ಪೂಜಾರ ಔಟ್ ಆದರೂ ಔಟ್ ಕೊಡದೇ ಕಳಪೆ ಅಂಪಾಯರಿಂಗ್ ಪ್ರದರ್ಶಿಸಿದ್ದ ಅಂಪಾಯರ್ ಗಳಿಂದಾಗಿ ಕರ್ನಾಟಕ ಸೋಲುವಂತಾಯಿತು. ಈ ಹಿನ್ನಲೆಯಲ್ಲಿ ಅಭಿಮಾನಿಗಳು ಸೌರಾಷ್ಟ್ರ ಮೇಲೆ ಭಾರೀ ಆಕ್ರೋಶ ಹೊಂದಿದ್ದಾರೆ.

ಇದರ ನಡುವೆಯೇ ಸೆಲ್ಫೀ ತೆಗೆದು, ಗೆದ್ದಿದ್ದಕ್ಕೆ ಹೆಮ್ಮೆಯಿದೆ. ಈ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ ಎಂದೆಲ್ಲಾ ಬರೆದುಕೊಂಡ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕಟ್‍ ಗೆ ಚೀಟ್ ಮಾಡಿ ಗೆದ್ದ ಮೇಲೆ ಖುಷಿಪಡುವುದೇಕೆ? ನಿಜವಾಗಿ ಗೆದ್ದಿದ್ದು ಕರ್ನಾಟಕ. ನಿಮ್ಮ ತಂಡದಲ್ಲಿ ಇನ್ನೊಬ್ಬರು ಇರಬೇಕಲ್ಲಾ? ನಿಜವಾದ ಗೆಲುವಿಗೆ ಕಾರಣರಾದವರು ಎಂದು ಅಭಿಮಾನಿಗಳು ಅಂಪಾಯರ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಸೋತ ಬಳಿಕ ಅಭಿಮಾನಿಗಳಿಗೆ ಕರ್ನಾಟಕ ಆಟಗಾರ ವಿನಯ್ ಕುಮಾರ್ ಟ್ವೀಟ್