Publish Date: Thu, 31 Jan 2019 (11:37 IST)
Updated Date: Thu, 31 Jan 2019 (11:39 IST)
ಮುಂಬೈ: ಬಾಲಿವುಡ್ ನಟಿಯೂ ಆಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಪತಿಯಲ್ಲಿ ಇಷ್ಟವಾದ ಸ್ವಭಾವ ಯಾವುದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ವಿರಾಟ್ ಜತೆ ಹಾಲಿಡೇ ಮೂಡ್ ನಲ್ಲಿರುವ ಅನುಷ್ಕಾ ಇದಕ್ಕೂ ಮೊದಲು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿರಾಟ್ ನಲ್ಲಿ ತನಗಿಷ್ಟವಾದ ಗುಣ ಯಾವುದೆಂದು ಬಹಿರಂಗಪಡಿಸಿದ್ದಾರೆ.
‘ವಿರಾಟ್ ತುಂಬಾ ಪ್ರಾಮಾಣಿಕ. ನಾನೂ ಪ್ರಾಮಾಣಿಕತೆಯನ್ನು ಇಷ್ಟಪಡುತ್ತೇನೆ. ಇದರಿಂದಾಗಿ ಹಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದೂ ಇದೆ. ಆದರೆ ನನಗೆ ಒಬ್ಬ ಪ್ರಾಮಾಣಿಕ ಸಂಗಾತಿ ಸಿಕ್ಕಿದ್ದಾನೆ ಎಂಬ ಖುಷಿಯಿದೆ. ನಮ್ಮ ನಡುವೆ ಯಾವುದೇ ನಾಟಕೀಯ ಸಂಗತಿಗಳಿಲ್ಲ ಎನ್ನುವುದೇ ಖುಷಿಯ ವಿಚಾರ’ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ