Select Your Language

Notifications

webdunia
webdunia
webdunia
webdunia

ಕೊಹ್ಲಿಯಿಲ್ಲದ ಟೀಂ ಇಂಡಿಯಾಕ್ಕೆ ಸಮಾಧಾನ ತಂದ ಧೋನಿ

ವಿರಾಟ್ ಕೊಹ್ಲಿ
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆ ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿ ಇಲ್ಲದ ಟೀಂ ಇಂಡಿಯಾಗೆ ಧೋನಿ ಫಿಟ್ನೆಸ್ ಸಮಾಧಾನ ತಂದಿದೆ.


ಕಳೆದ ಪಂದ್ಯದಲ್ಲಿ ಸ್ನಾಯು ಸೆಳೆತದಿಂದಾಗಿ ಧೋನಿ ಆಡಿರಲಿಲ್ಲ. ಆದರೆ ಈ ಪಂದ್ಯಕ್ಕೆ ಫಿಟ್ ಆಗಿರುವ ಧೋನಿ ಈಗಾಗಲೇ ಅಭ್ಯಾಸಕ್ಕಿಳಿದಿದ್ದಾರೆ. ಇದು ಭಾರತಕ್ಕೆ ಸಮಾಧಾನ ತಂದಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದಾರೆ. ಈಗಾಗಲೇ ಕೊಹ್ಲಿ ಯುವ ಆಟಗಾರ ಶಬ್ನಮ್ ಗಿಲ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ಕೊಹ್ಲಿ ಸ್ಥಾನಕ್ಕೆ ಗಿಲ್ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನು ಹಂಗಾಮಿ ನಾಯಕ ರೋಹಿತ್ ಶರ್ಮಾಗೆ ವೈಯಕ್ತಿಕವಾಗಿಯೂ ಇದು ವಿಶೇಷ ಪಂದ್ಯ. ಇದು ಅವರ 200 ನೇ ಏಕದಿನ ಪಂದ್ಯವಾಗಿದ್ದು, ಈ ಮೂಲಕ ಭಾರತದ ಪರ 200 ಪ್ಲಸ್ ಏಕದಿನ ಪಂದ್ಯವಾಡಿದ 14 ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಕಳೆದುಕೊಂಡಿದ್ದನ್ನು ಎ ತಂಡದಲ್ಲಿ ಕಂಡುಕೊಂಡ ಕೆಎಲ್ ರಾಹುಲ್