Select Your Language

Notifications

webdunia
webdunia
webdunia
webdunia

ಕೆಟ್ಟದಾಗಿ ಬ್ಯಾಟಿಂಗ್ ಮಾಡಿದೆವು: ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾರಿಂದ ಬ್ಯಾಟ್ಸ್ ಮನ್ ಗಳ ಮೇಲೆ ಕಿಡಿ

ರೋಹಿತ್ ಶರ್ಮಾ
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಅತ್ಯಂತ ಹೀನಾಯವಾಗಿ ಸೋತ ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.


‘ಕಳೆದ ಕೆಲವು ದಿನಗಳಿಂದ ನೀಡದಂತಹ ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆವು. ಇದನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ. ನ್ಯೂಜಿಲೆಂಡ್ ಬೌಲರ್ ಗಳನ್ನು ಪ್ರಶಂಸಿಸಲೇಬೇಕು. ಇದು ನಮಗೆ ಒಂದು ಪಾಠವಾಗಲಿದೆ. ಸೋಲಿಗೆ ನಮ್ಮನ್ನು ನಾವೇ ಹಳಿದುಕೊಳ್ಳಬೇಕಿ’ ಎಂದು ರೋಹಿತ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

‘ಎಲ್ಲರಿಗೂ ನಾವು ಮಾಡಿದ ತಪ್ಪೇನೆಂದು ತಿಳಿದಿದೆ. ದೇಶವನ್ನು ಪ್ರತಿನಿಧಿಸಿ ಆಡುವಾಗ ನಮ್ಮ ಉತ್ಕೃಷ್ಟ ಪ್ರದರ್ಶನ ನೀಡಲೇಬೇಕು.  ಈ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕಿದೆ’ ಎಂದು ರೋಹಿತ್ ಶರ್ಮಾ ಬ್ಯಾಟ್ಸ್ ಮನ್ ಗಳನ್ನು ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೈಲಾಗದ್ದನ್ನು ಸುಲಭವಾಗಿ ಮಾಡಿ ತೋರಿಸಿದ ನ್ಯೂಜಿಲೆಂಡ್