Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆ ಕನ್ನಡ ಕವನ ವಾಚನಕ್ಕೆ ಫಿದಾ ಆದ ಕನ್ನಡಿಗರು

ಅನಿಲ್ ಕುಂಬ್ಳೆ
ಬೆಂಗಳೂರು , ಶನಿವಾರ, 16 ನವೆಂಬರ್ 2019 (08:39 IST)
ಬೆಂಗಳೂರು: ಸ್ಪಿನ್ ಮೋಡಿಗಾರ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಇಂದಿಗೂ ತಮ್ಮ ಭಾಷೆ, ನೆಲ ಮರೆತಿಲ್ಲ. ಅದನ್ನು ಅವರು ಕವನ ವಾಚನ ಸವಾಲು ಸ್ವೀಕರಿಸುವ ಮೂಲಕ ಸಾಬೀತುಪಡಿಸಿದ್ದಾರೆ.


ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುವ ಕವನ ವಾಚನ ಅಭಿಯಾನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅನಿಲ್ ಕುಂಬ್ಳೆಗೆ ಕವನ ವಾಚನದ ಸವಾಲೊಡ್ಡಿದ್ದರು. ಅದನ್ನು ಸ್ವೀಕರಿಸಿರುವ ಅಪ್ಪಟ ಕನ್ನಡ ಪ್ರತಿಭೆ ಕುಂಬ್ಳೆ ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಎಂಬ ಕನ್ನಡ ಕವನ ವಾಚನ ಮಾಡಿದ್ದಾರೆ.

ಅಷ್ಟೇ ಅಲ್ಲ ತಾವು ಕವನ ವಾಚನ ಮಾಡಿದ ಮೇಲೆ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಮತ್ತು ಗಾಯಕ ವಿಜಯ್ ಪ್ರಕಾಶ್ ಗೆ ಈ ಚಾಲೆಂಜ್ ವರ್ಗಾಯಿಸಿದ್ದಾರೆ. ಅದರಲ್ಲೂ ವಿಜಯ್ ಪ್ರಕಾಶ್ ಹಾಡಿನ ಮೂಲಕವೇ ಕವನ ಹೇಳಬೇಕು ಎಂದು ಷರತ್ತು ಹಾಕಿದ್ದಾರೆ.

ಅನಿಲ್ ಕುಂಬ್ಳೆ ಕನ್ನಡ ಕವನ ವಾಚನ ಮಾಡಿರುವ ವಿಡಿಯೋ ನೋಡಿರುವ ಅಭಿಮಾನಿಗಳು ನೀವು ನಮ್ಮ ಕನ್ನಡದ ಹೆಮ್ಮೆ ಸರ್. ಎಷ್ಟೇ ಖ್ಯಾತಿ ಬಂದರೂ ಇಂದಿಗೂ ಕನ್ನಡ ಮರೆತಿಲ್ವಲ್ಲಾ ಎಂದು ಅಭಿನಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಅಭ್ಯಾಸಕ್ಕಿಳಿದ ಧೋನಿ