Select Your Language

Notifications

webdunia
webdunia
webdunia
webdunia

ಅನಿಲ್ ಕುಂಬ್ಳೆಯನ್ನೂ ಮೀರಿ ವೇಗದ ಸರದಾರನಾದ ಆರ್ ಅಶ್ವಿನ್

ಅನಿಲ್ ಕುಂಬ್ಳೆಯನ್ನೂ ಮೀರಿ ವೇಗದ ಸರದಾರನಾದ ಆರ್ ಅಶ್ವಿನ್
ಇಂಧೋರ್ , ಗುರುವಾರ, 14 ನವೆಂಬರ್ 2019 (16:13 IST)
ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಮಾಡಿದ್ದಾರೆ.


ರವಿಚಂದ್ರನ್ ಅಶ್ವಿನ್ ತವರಿನಲ್ಲಿ 250 ನೇ ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ತವರು ನೆಲದಲ್ಲಿ ವೇಗವಾಗಿ 250 ವಿಕೆಟ್ ಕಬಳಿಸಿದ ದಾಖಲೆ ಮಾಡಿದರು. ಅಶ್ವಿನ್ ಬಿಟ್ಟರೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಈ ದಾಖಲೆ ಮಾಡಿದ್ದಾರೆ.

ಆದರೆ ಕುಂಬ್ಳೆಗೆ ಈ ಸಾಧನೆ ಮಾಡಲು 43 ಪಂದ್ಯ ಬೇಕಾಗಿತ್ತು. ಅಶ್ವಿನ್ 42 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಹಾಗಿದ್ದರೂ ತವರು ನೆಲದಲ್ಲಿ 350 ವಿಕೆಟ್ ಪಡೆದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಹರ್ಭಜನ್ ತವರಿನಲ್ಲಿ 51 ಪಂದ್ಯಗಳಿಂದ 263 ವಿಕೆಟ್ ಕಬಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಬಾಂಗ್ಲಾ ಟೆಸ್ಟ್: ಬಾಂಗ್ಲಾ ಹುಲಿಗಳ ಮೇಲೆ ಟೀಂ ಇಂಡಿಯಾ ವೇಗಿಗಳ ಕಂಟ್ರೋಲ್