Publish Date: Thu, 14 Nov 2019 (09:32 IST)
Updated Date: Thu, 14 Nov 2019 (09:34 IST)
ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಮೊದಲ ಟೆಸ್ಟ್ ಆರಂಭವಾಗಲಿದ್ದು, ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಧೋನಿ ದಾಖಲೆಯೊಂದನ್ನು ಮುರಿಯಲಿದ್ದಾರೆ.
ಇತ್ತಂಡಗಳ ನಡುವೆ ನಡೆದ ಟೆಸ್ಟ್ ಪಂದ್ಯಗಳ ಪೈಕಿ ಅತೀ ಹೆಚ್ಚು ವಿಕೆಟ್ ಕೀಳಲು ನೆರವಾದ ದಾಖಲೆ ಇದೀಗ ಧೋನಿ ಹೆಸರಲ್ಲಿದೆ. ಧೋನಿ ಭಾರತ-ಬಾಂಗ್ಲಾ ನಡುವಿನ ಸರಣಿಯಲ್ಲಿ ಒಟ್ಟು 3 ಪಂದ್ಯಗಳಿಂದ 15 ವಿಕೆಟ್ ಕಬಳಿಸಿದ ದಾಖಲೆ ಹೊಂದಿದ್ದಾರೆ.
ಸಹಾ 2 ಪಂದ್ಯಗಳಿಂದ 7 ಬಾರಿ ಬ್ಯಾಟ್ಸ್ ಮನ್ ಔಟಾಗಲು ನೆರವಾಗಿದ್ದು, ಧೋನಿ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಈ ಪಂದ್ಯದಲ್ಲಿ ಇಲ್ಲವೇ ಮುಂದಿನ ಪಂದ್ಯದಲ್ಲಾದರೂ ಸಹಾಗೆ ಈ ದಾಖಲೆ ಮುರಿಯುವ ಅವಕಾಶವಿದೆ.