Publish Date: Tue, 12 Nov 2019 (10:54 IST)
Updated Date: Tue, 12 Nov 2019 (10:55 IST)
ಮುಂಬೈ: ಬಾಂಗ್ಲಾದೇಶ ವಿರುದ್ಧ ನವಂಬರ್ 22 ರಿಂದ ನಡೆಯಲಿರುವ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ತಯಾರಾಗಲು ವಿಶೇಷ ಸೌಲಭ್ಯ ನೀಡಲು ಟೀಂ ಇಂಡಿಯಾ ಕ್ರಿಕೆಟಿಗರು ಮನವಿ ಮಾಡಿದ್ದಾರೆ.
ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟಿಗರು ಪಿಂಕ್ ಬಾಲ್ ನಲ್ಲಿ ಆಡಲು ಪ್ರಾಕ್ಟೀಸ್ ಮಾಡಬೇಕಿದೆ. ಇದಕ್ಕಾಗಿ ಈಗಾಗಲೇ ಕೆಲವು ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರು ಅಭ್ಯಾಸ ಶುರು ಮಾಡಿಕೊಂಡಿದ್ದಾರೆ.
ಅದಲ್ಲದೆ ಇಂದು ಸಂಜೆಯಿಂದ ಟೀಂ ಇಂಡಿಯಾ ಕ್ರಿಕೆಟಿಗರು ಹೊನಲು ಬೆಳಕಿನಲ್ಲಿ ಪಿಂಕ್ ಬಾಲ್ ನಲ್ಲಿ ಪ್ರಾಕ್ಟೀಸ್ ಮಾಡಲಿದ್ದಾರೆ. ಈ ಮೂಲಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲಿದ್ದಾರೆ.