Publish Date: Tue, 12 Nov 2019 (09:20 IST)
Updated Date: Tue, 12 Nov 2019 (09:21 IST)
ಮುಂಬೈ: 2008 ರಲ್ಲಿ ರಾಜಸ್ಥಾನ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದ ಗ್ರೆಗ್ ಚಾಪೆಲ್ ತಮ್ಮ ಮುಂದೆ ಬೌಲಿಂಗ್ ಪ್ರದರ್ಶನ ನೀಡಿದ್ದ ದೀಪಕ್ ಚಹರ್ ರನ್ನು ನಿನ್ನಲ್ಲಿ ಕ್ಷಮತೆಯಿಲ್ಲ ಎಂದು ಮನೆಗೆ ಕಳುಹಿಸಿದ್ದರಂತೆ. ಅದೇ ಚಹರ್ ಈಗ ಟೀಂ ಇಂಡಿಯಾ ಪಾಲಿಗೆ ಹೀರೋ ಆಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 6 ವಿಕೆಟ್ ಕಿತ್ತು ವಿಶ್ವದಾಖಲೆ ಮಾಡಿದ ದೀಪಕ್ ಚಹರ್ ತಮ್ಮನ್ನು ಹಿಂದೆ ಟೀಕಿಸಿದ್ದ ಗ್ರೆಗ್ ಚಾಪೆಲ್ ಮತ್ತು ನಂತರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಅವಕಾಶ ಕೊಟ್ಟ ಎಂಎಸ್ ಧೋನಿಯನ್ನು ಸ್ಮರಿಸಿಕೊಂಡಿದ್ದಾರೆ.
ಚಾಪೆಲ್ ಟೀಕೆ ಕೇಳಿದ ಮೇಲೆ ಬೇಸತ್ತು ಸುಮ್ಮನೇ ಕೂರದ ಚಹರ್ ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮಪಟ್ಟು ರಾಜಸ್ಥಾನ ರಣಜಿ ತಂಡದ ಪರ ಆಡಿದ್ದರು. ಅದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅವರನ್ನು ಖರೀದಿಸಿತು. ಇಲ್ಲಿ ಧೋನಿಯಿಂದ ಅವಕಾಶ ಪಡೆದ ತನಗೆ ಚೆನ್ನೈ ಪರ ಉತ್ತಮ ಪ್ರದರ್ಶನ ನೀಡಲು ಸಾಧ‍್ಯವಾಯಿತು ಎಂದು ದೀಪಕ್ ಸ್ಮರಿಸಿಕೊಂಡಿದ್ದಾರೆ.