Publish Date: Thu, 14 Nov 2019 (11:41 IST)
Updated Date: Thu, 14 Nov 2019 (11:43 IST)
ಬೆಂಗಳೂರು: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳು ಎದುರಾಳಿಗಳನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದ್ದಾರೆ.
ಭೋಜನ ವಿರಾಮದ ವೇಳೆಗೆ ಬಾಂಗ್ಲಾ 3 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ ಸಂಕಷ್ಟದಲ್ಲಿದೆ. ಟೀ ಇಂಡಿಯಾ ವೇಗಿಗಳು ಸಂಪೂರ್ಣವಾಗಿ ಎದುರಾಳಿಗಳನ್ನು ಶಿಸ್ತುಬದ್ಧ ದಾಳಿಯಿಂದ ಕಟ್ಟಿಹಾಕಿದ್ದಾರೆ. ಅದರಲ್ಲೂ ವಿಶೇಷವಾಗಿ ಇಶಾಂತ್ ಶರ್ಮಾ ಬಿಗುವಿನ ದಾಳಿ ಸಂಘಟಿಸಿದ್ದಾರೆ.
ಬಾಂಗ್ಲಾ ಪರ ಮುಮಿನುಲ್ ಹಕ್ 22 ಮತ್ತು ಮುಶ್ಫಿಕರ್ ರಹೀಂ 14 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತದ ಪರ ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದ್ದಾರೆ.