Publish Date: Sat, 16 Nov 2019 (08:36 IST)
Updated Date: Sat, 16 Nov 2019 (08:38 IST)
ರಾಂಚಿ: ವಿಶ್ವಕಪ್ ನಂತರ ಕ್ರಿಕೆಟ್ ಮೈದಾನದಿಂದ ದೂರವೇ ಉಳಿದಿದ್ದ ಹಿರಿಯ ವಿಕೆಟ್ ಕೀಪರ್ ಧೋನಿ ಮತ್ತೆ ಮೈದಾನಕ್ಕೆ ಮರಳುತ್ತಾರಾ ಅಥವಾ ನಿವೃತ್ತರಾಗುತ್ತಾರಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಅವರೀಗ ಮತ್ತೆ ಮೈದಾನಕ್ಕಿಳಿದಿದ್ದು ತಮ್ಮ ತವರು ರಾಂಚಿಯ ಮೈದಾನದಲ್ಲಿ ನೆಟ್ ಪ್ರಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ. ಆದರೆ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಧೋನಿ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಹಲವು ದಿನಗಳಿಂದ ಕ್ರಿಕೆಟ್ ನಿಂದ ದೂರವುಳಿದಿರುವ ಧೋನಿ ನಿಯಮದ ಪ್ರಕಾರ ದೇಶೀಯ ಕ್ರಿಕೆಟ್ ನಲ್ಲಿ ಆಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕು. ಆದರೆ ಧೋನಿ ವಿಚಾರದಲ್ಲಿ ಬಿಸಿಸಿಐ ನಿಯಮ ಸಡಿಸಲುತ್ತಾ ಎಂದು ಕಾದು ನೋಡಬೇಕಿದೆ.