Publish Date: Wed, 15 May 2019 (07:52 IST)
Updated Date: Wed, 15 May 2019 (07:54 IST)
ಮುಂಬೈ: ಕ್ರಿಕೆಟ್ ನ ಜಂಟಲ್ ಮ್ಯಾನ್ ಕ್ರಿಕೆಟಿಗರ ಪೈಕಿ ಅಗ್ರ ಸಾಲಿನಲ್ಲಿ ನಿಲ್ಲುವ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ತಾವೂ ಹಿಂದೊಮ್ಮೆ ಅಂಪಾಯರ್ ತೀರ್ಪು ತಮ್ಮ ಪರವಾಗಿ ಬರಲು ಅಂಪಾಯರ್ ಗೆ ಅಮಿಷ ಒಡ್ಡಿದ್ದರಂತೆ!
ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯೊಂದರಲ್ಲಿ ಈ ಘಟನೆ ನಡೆದಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಎಲ್ಲಾ ತೀರ್ಪುಗಳು ನಮ್ಮ ವಿರುದ್ಧವಾಗಿ ಬರುತ್ತಿತ್ತು. ಯಾಕೆಂದರೆ ಅವರಿಗೆ ಸ್ಪಿನ್ನರ್ ಗಳಿಗೆ ಅಂಪಾಯರಿಂಗ್ ಮಾಡಿ ಗೊತ್ತಿರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲು ನಾನು ಅಂಪಾಯರ್ ನನ್ನು ಖುದ್ದಾಗಿ ಭೇಟಿ ಮಾಡಿದ ಅವರನ್ನು ನನ್ನ ಕಡೆಗೆ ಸೆಳೆದುಕೊಂಡೆ.
ಆ ಅಂಪಾಯರ್ ನನ್ನು ನೆಟ್ ಪ್ರಾಕ್ಟೀಸ್ ಮಾಡುವಾಗ ಕರೆದೆವು. ಬಳಿಕ ಸ್ಪಿನ್ ಬೌಲಿಂಗ್ ಮಾಡಿ ಹೇಗೆ ಪ್ಯಾಡ್ ಗೆ ತಗುಲಿದರೆ ಎಲ್ ಬಿಡಬ್ಲ್ಯೂ ನೀಡಬೇಕು ಎಂದು ಪಾಠ ಹೇಳಿಕೊಟ್ಟೆವು. ಹೀಗೆ ಅವರನ್ನು ಕನ್ವಿನ್ಸ್ ಮಾಡಿದ್ದೆವು.
ಅದು ಕೆಲಸ ಮಾಡಿತು. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎಲ್ಲವೂ ನಾವು ಅಂದುಕೊಂಡಂತೇ ನಡೆಯಿತು ಎಂದು ಕುಂಬ್ಳೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ಆ ಅಂಪಾಯರ್ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ