Publish Date: Thu, 07 Feb 2019 (09:20 IST)
Updated Date: Thu, 07 Feb 2019 (09:22 IST)
ಮುಂಬೈ: ಮಹಿಳೆಯರ ಬಗ್ಗೆ ಖಾಸಗಿ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿ ಪ್ರಕರಣ ದಾಖಲಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಬಗ್ಗೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣ ದುರದೃಷ್ಟಕರವಾಗಿತ್ತು. ಈ ಆಟಗಾರರಿಗೆ ನಡವಳಿಕೆ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಕುಂಬ್ಳೆ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಕೂಡಾ ಇದೇ ಅಭಿಪ್ರಾಯ ಹೊರಹಾಕಿದ್ದರು.
‘ಈ ಪ್ರಕರಣದಿಂದ ಇಬ್ಬರೂ ಕ್ರಿಕೆಟಿಗರು ಪಾಠ ಕಲಿತಿರಬಹುದು. ಇಂತಹದ್ದೊಂದು ಪ್ರಕರಣವಾಗಿದ್ದು ನಿಜಕ್ಕೂ ದುರದೃಷ್ಟಕರ. ಆದರೆ ಕ್ರಿಕೆಟಿಗರಿಗೆ ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ ನೀತಿ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಕುಂಬ್ಳೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ