Publish Date: Tue, 29 Dec 2020 (10:40 IST)
Updated Date: Tue, 29 Dec 2020 (10:42 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಗೆಲುವಿನ ಬಳಿಕ ಮಾತನಾಡಿರುವ ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರೆಹಾನೆ ರೋಹಿತ್ ಶರ್ಮಾ ಕಮ್ ಬ್ಯಾಕ್ ಬಗ್ಗೆ ಖುಷಿಯಿಂದಲೇ ಮಾತನಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ಅವಧಿಯಲ್ಲಿರುವ ರೋಹಿತ್ ಮೂರನೇ ಟೆಸ್ಟ್ ಗೆ ತಂಡಕ್ಕೆ ವಾಪಸ್ ಆಗಲಿದ್ದಾರೆ. ಇದು ನಮಗೆಲ್ಲಾ ಖುಷಿಯ ವಿಚಾರ. ನಿನ್ನೆಯಷ್ಟೇ ಅವರ ಜೊತೆ ಮಾತನಾಡಿದ್ದೇನೆ. ಅವರು ಸುಧಾರಿಸಿಕೊಂಡಿದ್ದಾರೆ. ಮುಂದಿನ ಪಂದ್ಯಕ್ಕೆ ಅವರು ತಂಡಕ್ಕೆ ವಾಪಸ್ ಆಗುತ್ತಿರುವುದು ನಮಗೆ ದೊಡ್ಡ ಬಲ ಸಿಕ್ಕಿದಂತೆ ಎಂದು ರೆಹಾನೆ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.