Publish Date: Tue, 29 Dec 2020 (10:18 IST)
Updated Date: Tue, 29 Dec 2020 (10:19 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಕೆಲವು ದಾಖಲೆಗಳನ್ನೂ ತನ್ನದಾಗಿಸಿಕೊಂಡಿದೆ.
ಈ ಗೆಲುವಿನ ಮೂಲಕ ಮೆಲ್ಬೋರ್ನ್ ಭಾರತಕ್ಕೆ ಅದೃಷ್ಟಶಾಲಿ ಕ್ರೀಡಾಂಗಣವೆನಿಸಿತು. ಈ ಮೈದಾನದಲ್ಲಿ ಭಾರತ ಅತೀ ಹೆಚ್ಚು ಬಾರಿ ಅಂದರೆ 14 ನೇ ಗೆಲುವು ದಾಖಲಿಸುವ ಮೂಲಕ ವಿದೇಶದ ಒಂದೇ ತಾಣದಲ್ಲಿ ಅತೀ ಹೆಚ್ಚು ಗೆಲುವು ಪಡೆದ ದಾಖಲೆ ಮಾಡಿತು. ಅಜಿಂಕ್ಯಾ ರೆಹಾನೆ ತಾವು ನಾಯಕತ್ವ ವಹಿಸಿದ ಎಲ್ಲಾ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಧೋನಿ ಬಳಿಕ ನಾಯಕತ್ವ ವಹಿಸಿದ ಮೂರೂ ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದರು. ಈ ಮೂರು ಪಂದ್ಯಗಳ ಪೈಕಿ ಎರಡು ಆಸ್ಟ್ರೇಲಿಯಾ ವಿರುದ್ಧ ಎನ್ನುವುದು ವಿಶೇಷ.