Select Your Language

Notifications

webdunia
webdunia
webdunia
webdunia

ಶತಕ ಗಳಿಸಿದರೂ ಇದು ನನ್ನ ಬೆಸ್ಟ್ ಇನಿಂಗ್ಸ್ ಅಲ್ಲ ಎಂದ ಅಜಿಂಕ್ಯಾ ರೆಹಾನೆ

ಅಜಿಂಕ್ಯಾ ರೆಹಾನೆ
ಮೆಲ್ಬೋರ್ನ್ , ಮಂಗಳವಾರ, 29 ಡಿಸೆಂಬರ್ 2020 (09:07 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ ನಾಯಕನ ಜವಾಬ್ಧಾರಿ ಜೊತೆಗೆ ಶತಕ ಗಳಿಸಿದರೂ ಇದು ನನ್ನ ಬೆಸ್ಟ್ ಇನಿಂಗ್ಸ್ ಅಲ್ಲ ಎಂದಿದ್ದಾರೆ ಅಜಿಂಕ್ಯಾ ರೆಹಾನೆ.


ನಿನ್ನೆಯ ದಿನದಾಟದ ಬಳಿಕ ಮಾತನಾಡಿರುವ ರೆಹಾನೆ ‘ಈಗಲೂ ನನ್ನ ವೃತ್ತಿಜೀವನದ ಬೆಸ್ಟ್ ಶತಕ ಎಂದರೆ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ಗಳಿಸಿದ್ದು’ ಎಂದಿದ್ದಾರೆ ರೆಹಾನೆ. ಹಾಗಿದ್ದರೂ ಈ ಪಂದ್ಯದಲ್ಲಿ ಶತಕ ಗಳಿಸಿರುವುದು ವಿಶೇಷವೇ ಎಂದಿದ್ದಾರೆ. ಇನ್ನು, ರನೌಟ್ ಆದ ಬಳಿಕ ರವೀಂದ್ರ ಜಡೇಜಾ ಬೆನ್ನುತಟ್ಟಿದ್ದು ಎಲ್ಲರ ಗಮನ ಸೆಳೆದಿತ್ತು. ಈ ಬಗ್ಗೆ ಮಾತನಾಡಿರುವ ಅವರು ‘ನನ್ನ ರನೌಟ್ ಗೆ ಕಾರಣವಾದರೆ ಎಂದು ಯೋಚಿಸುತ್ತಿರಬೇಡ. ನೀನು ಚೆನ್ನಾಗಿ ಆಡು’ ಎಂದು ಹೇಳಿ ಬಂದಿದ್ದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಅವಾರ್ಡ್ಸ್: ಕೊಹ್ಲಿ ದಶಕದ ಕ್ರಿಕೆಟಿಗ, ಧೋನಿ ಸ್ಪೂರ್ತಿಯುತ ಕ್ರಿಕೆಟಿಗ