Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದ ಕೆಎಲ್ ರಾಹುಲ್

ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದ ಕೆಎಲ್ ರಾಹುಲ್
ಮುಂಬೈ , ಸೋಮವಾರ, 28 ಡಿಸೆಂಬರ್ 2020 (10:18 IST)
ಮುಂಬೈ: 2020 ಇನ್ನೇನು ಮುಗಿಯುತ್ತಾ ಬಂತು. ಈ ವರ್ಷ ಕೊರೋನಾದಿಂದಾಗಿ ಕ್ರಿಕೆಟ್ ಪಂದ್ಯವಾಗಿದ್ದೇ ಕಡಿಮೆ. ಹಾಗಿದ್ದರೂ ಭಾರತೀಯರ ಪೈಕಿ ಅತ್ಯುತ್ತಮ ಸಾಧನೆ ಮಾಡಿದ್ದು ಯಾರು ಗೊತ್ತಾ?


ರನ್ ಮೆಷಿನ್ ವಿರಾಟ್ ಕೊಹ್ಲಿ ಈ ವರ್ಷ ಸಂಪೂರ್ಣ ವಿಫಲರಾಗಿದ್ದರು. ಆದರೆ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಹೀಗಾಗಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕೊಹ್ಲಿಯನ್ನೂ ಹಿಂದಿಕ್ಕಿ ರಾಹುಲ್ ನಂ.1 ಆಗಿದ್ದಾರೆ.  ಒಟ್ಟು 443 ರನ್ ಗಳಿಸಿರುವ ರಾಹುಲ್ ಜಾಗತಿಕ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಟಾಪ್ 5 ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ಕೊಹ್ಲಿ ಈ ವರ್ಷ 413 ರನ್ ಗಳಿಸಿದ್ದು, ಜಾಗತಿಕ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಿಂಕ್ಯಾ ರೆಹಾನೆ ಆಟಕ್ಕೆ ವಿರಾಟ್ ಕೊಹ್ಲಿ ಫುಲ್ ಫಿದಾ