Publish Date: Mon, 28 Dec 2020 (16:19 IST)
Updated Date: Mon, 28 Dec 2020 (16:22 IST)
ದುಬೈ: ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಲಾಗಿದೆ. ಇನ್ನು, ಕೂಲ್ ಕ್ಯಾಪ್ಟನ್ ಧೋನಿ ಸ್ಪೂರ್ತಿಯುತ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಧೋನಿ, ರವಿಚಂದ್ರನ್ ಅಶ್ವಿನ್, ಜೋ ರೂಟ್ ಕೂಡಾ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಸ್ಪರ್ಧಿಸಿದ್ದರು. ಆದರೆ ಅಂತಿಮವಾಗಿ ಸರ್ ಗ್ಯಾರಿ ಸೋಬರ್ಸ್ ಹೆಸರಿನಲ್ಲಿ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಕೊಹ್ಲಿ ಆಯ್ಕೆಯಾಗಿದ್ದಾರೆ. ಇನ್ನು, ಐಸಿಸಿ ಪ್ರಶಸ್ತಿ ಗೆದ್ದಿರುವುದು ನನ್ನ 10 ವರ್ಷಗಳ ಕಠಿಣ ಪರಿಶ್ರಮದ ಫಲ ಎಂದು ಕೊಹ್ಲಿ ಹೇಳಿದ್ದಾರೆ. ಇನ್ನು, ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವ್ ಸ್ಮಿತ್ ದಶಕದ ಟೆಸ್ಟ್ ಕ್ರಿಕೆಟಿಗ, ಅಫ್ಘಾನಿಸ್ತಾದ ರಶೀದ್ ಖಾನ್ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.