Publish Date: Mon, 28 Dec 2020 (12:41 IST)
Updated Date: Mon, 28 Dec 2020 (12:43 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ.
ಇದರೊಂದಿಗೆ 2 ರನ್ ಗಳ ಮುನ್ನಡೆ ಸಾಧಿಸಿದೆ. ಆದರೆ ಇನ್ನು ಕೇವಲ 4 ವಿಕೆಟ್ ಬಾಕಿಯಿದ್ದು, ಈ ಬ್ಯಾಟ್ಸ್ ಮನ್ ಗಳು ಟೀಂ ಇಂಡಿಯಾಕ್ಕೆ ಎಷ್ಟು ರನ್ ಗಳ ಗುರಿ ನೀಡಲು ಸಾಧ‍್ಯ ಎಂದು ಕಾದುನೋಡಬೇಕಿದೆ. ಭಾರತ ನಾಳೆಯ ದಿನದಾಟದಲ್ಲಿ ಎಷ್ಟು ಬೇಗ ಎದುರಾಳಿಯನ್ನು ಆಲೌಟ್ ಮಾಡುತ್ತದೋ ಅಷ್ಟು ಗೆಲುವು ಸುಲಭವಾಗಲಿದೆ. ಒಂದು ವೇಳೆ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಡಿದ ತಪ್ಪನ್ನು ಟೀಂ ಇಂಡಿಯಾ ಇಲ್ಲಿ ಪುನರಾವರ್ತಿಸಿ ದ್ವಿತೀಯ ಇನಿಂಗ್ಸ್ ನಲ್ಲಿ ಎಡವಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಾದೀತು. ಹೀಗಾಗಿ ನಾಳೆಯ ಬೆಳಗಿನ ಅವಧಿ ಮುಖ್ಯವಾಗಲಿದೆ. ಭಾರತದ ಪರ ರವೀಂದ್ರ ಜಡೇಜಾ 2 ವಿಕೆಟ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದ್ದಾರೆ.