Publish Date: Mon, 28 Dec 2020 (10:51 IST)
Updated Date: Mon, 28 Dec 2020 (10:53 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಜಿಂಕ್ಯಾ ರೆಹಾನೆ ರನೌಟ್ ಆದ ಬಳಿಕ ಸಹ ಆಟಗಾರ ರವೀಂದ್ರ ಜಡೇಜಾ ಜೊತೆಗೆ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ತಾವು ರನೌಟ್ ಆದ ಬಳಿಕ ಜಡೇಜಾ ಬಳಿ ಬಂದ ರೆಹಾನೆ ಅವರ ಎದೆ ತಟ್ಟಿ, ಇನಿಂಗ್ಸ್ ಮುಂದುವರಿಸು ಎಂದು ಸ್ಪೂರ್ತಿ ತುಂಬಿ ಹೊರನಡೆದಿದ್ದನ್ನು ನೋಡಿ ನೆಟ್ಟಿಗರು ನಿಜವಾದ ನಾಯಕ ಎಂದರೆ ಇವರೇ ಎಂದು ಕೊಂಡಾಡಿದ್ದಾರೆ. ರನೌಟ್ ಆಗಿದ್ದಕ್ಕೆ ಸಹ ಆಟಗಾರನ ಮೇಲೆ ಕಿಡಿ ಕಾರದೇ ಹುರಿದುಂಬಿಸುವ ಕೆಲಸ ಮಾಡಿದ ರೆಹಾನೆ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.