ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮ ದಂಪತಿ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಕೊನೆ ಹಾಡಿದ್ದಾರೆ. ಇದೀಗ ವಿಚ್ಛೇದನಕ್ಕಾಗಿ ಧನಶ್ರೀ ವರ್ಮಗೆ ಚಹಲ್ ಎಷ್ಟು ಕೋಟಿ ಪರಿಹಾರ ಕೊಟ್ಟರು ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದೆ.
ಸಾಮಾನ್ಯವಾಗಿ ಭಾರತೀಯ ಕಾನೂನು ಪ್ರಕಾರ ವಿಚ್ಛೇದನದ ಸಂದರ್ಭದಲ್ಲಿ ಪತಿಯು ಪತ್ನಿಗೆ ಜೀವನಾಂಶ ಕೊಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಅನೇಕ ಬಾರಿ ಪತಿ ಶ್ರೀಮಂತನಾಗಿದ್ದಲ್ಲಿ ಭಾರೀ ಪ್ರಮಾಣದ ಹಣ ನೀಡಬೇಕಾಗಿ ಬರುತ್ತದೆ.
ಇದೀಗ ಚಹಲ್ ವಿಚಾರದಲ್ಲೂ ಅದೇ ನಡೆದಿದೆ ಎನ್ನಲಾಗಿದೆ. ಪತ್ನಿ ಜೊತೆ ವಿಚ್ಛೇದನಕ್ಕೆ ಚಹಲ್ ಸುಮಾರು 60 ಕೋಟಿ ರೂ. ಪರಿಹಾರವಾಗಿ ನೀಡಿದ್ದಾರೆ ಎಂದು ಸುದ್ದಿಯಾಗಿದೆ. ಇದು ಎಷ್ಟು ನಿಜ ಎಂಬುದು ಇನ್ನೂ ಖಚಿತವಾಗಿಲ್ಲ.
ಆದರೆ ಚಹಲ್ ಇಷ್ಟು ದೊಡ್ಡ ಮೊತ್ತದ ಜೀವನಾಂಶ ಕೊಟ್ಟಿದ್ದಾರೆ ಎಂದು ಸುದ್ದಿಯಾಗುತ್ತಿದ್ದಂತೇ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವಿಚ್ಛೇದನ ಎಂದರೆ ಪುರುಷರಿಗೆ ದೊಡ್ಡ ಅನ್ಯಾಯ, ಅದೇ ಮಹಿಳೆಯರಿಗೆ ಆದಾಯಕ್ಕೆ ಒಂದು ಮಾರ್ಗ ಎಂದು ಕೆಲವರು ಕಾಲೆಳೆದಿದ್ದಾರೆ.