ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡ ಕೊಹ್ಲಿಯನ್ನು ಕೆಲವು ಪ್ರೇಕ್ಷಕರು ನಿನ್ನೆ ಹೀಯಾಳಿಸಿದ ವಿಡಿಯೋವೊಂದು ವೈರಲ್ ಆಗಿದೆ.
ಟೀಂ ಇಂಡಿಯಾ ದಿಗ್ಗಜ ಬ್ಯಾಟಿಗರಾಗಿರುವ ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಕೊಹ್ಲಿ ಬ್ಯಾಟ್ ನಿಂದ ಮೊದಲಿನಂತೆ ರನ್ ಹರಿದುಬರುತ್ತಿಲ್ಲ. ಈ ಕಾರಣಕ್ಕೆ ಅವರು ಭಾರೀ ಟೀಕೆಗೊಳಗಾಗಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 22 ರನ್ ಗಳಿಸಲು ಅವರು ಬರೋಬ್ಬರಿ 38 ಎಸೆತ ಎದುರಿಸಿದ್ದರು. ಈ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೊಳಗಾಗಿದ್ದರು. ಮೈದಾನದಲ್ಲೂ ಇದೇ ವಿಚಾರವಾಗಿ ಕೆಲವು ಪ್ರೇಕ್ಷಕರ ಗುಂಪು ಕೊಹ್ಲಿಯನ್ನು ಹೀಯಾಳಿಸಿದೆ.
ಪಂದ್ಯ ಗೆದ್ದ ಮೇಲೆ ರೋಹಿತ್ ಶರ್ಮಾ ಹಿಂದೆ ಇತರೆ ಆಟಗಾರರ ಜೊತೆ ಕೊಹ್ಲಿಯೂ ಎದುರಾಳಿ ಆಟಗಾರರ ಕೈಲುಕಲು ಮೈದಾನಕ್ಕೆ ಸರತಿಯಲ್ಲಿ ಬಂದಿದ್ದರು. ಈ ವೇಳೆ ಕೆಲವು ಪ್ರೇಕ್ಷಕರ ಗುಂಪು ಚೋಕ್ಲಿ ಎಂದು ಕರೆದಿದ್ದಲ್ಲದೆ, ನಂ.1 ಟೆಸ್ಟ್ ಪ್ಲೇಯರ್ ಎಂದು ಹೀಯಾಳಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.