Select Your Language

Notifications

webdunia
webdunia
webdunia
webdunia

ಯಜ್ವೇಂದ್ರ ಚಹಲ್ ಗೆ ಧನಶ್ರೀವರ್ಮ ಇಷ್ಟು ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದಾರಂತೆ

Chala-Dhanashree

Krishnaveni K

ಮುಂಬೈ , ಶುಕ್ರವಾರ, 10 ಜನವರಿ 2025 (11:47 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜ್ವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀವರ್ಮ ವಿಚ್ಛೇದನದ ರೂಮರ್ ಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಧನಶ್ರೀ ಭಾರೀ ಮೊತ್ತಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ಸುದ್ದಿ ಹಬ್ಬಿದೆ.

ಚಹಲ್ ವಿಚ್ಛೇದನದ ಸುದ್ದಿ ಹಬ್ಬುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ಧನಶ್ರೀ ತೀವ್ರ ಟ್ರೋಲ್ ಗೊಳಗಾಗಿದ್ದಾರೆ. ಕ್ರಿಕೆಟಿಗರೆಲ್ಲರೂ ಡ್ಯಾನ್ಸರ್, ಮಾಡೆಲ್ ಗಳನ್ನು ಮದುವೆಯಾಗುತ್ತಾರೆ. ಕೊನೆಗೆ ಅವರು ಕೈ ಕೊಡುತ್ತಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಇದೇ ರೀತಿ ಧನಶ್ರೀ ಕೂಡಾ ಟ್ರೋಲ್ ಆಗಿದ್ದಾರೆ. ವಿಚ್ಛೇದನಕ್ಕಾಗಿ ಚಹಲ್ ಬಳಿಯಿಂದ ಧನಶ್ರೀ 60 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ. ಇನ್ನೊಂದು ಕಡೆ ಚಹಲ್ ಒಟ್ಟು ಆಸ್ತಿಯೇ 50 ಕೋಟಿ. ಇದರಲ್ಲಿ ಅರ್ಧದಷ್ಟು ಈಗ ಧನಶ್ರೀಗೆ ಕೊಡಬೇಕಾಗಿದೆ ಎನ್ನಲಾಗುತ್ತಿದೆ.

ಇದು ಹಣ ಮಾಡೋ ದಂಧೆ ಎಂದು ಕೆಲವರು ಟೀಕಿಸಿದ್ದಾರೆ. ಇಬ್ಬರೂ ಇನ್ನೂ ಅಧಿಕೃತವಾಗಿ ವಿಚ್ಛೇದನ ಘೋಷಿಸಿಲ್ಲ. ಆದರೂ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಸಾಕಷ್ಟು ರೂಮರ್ ಗಳು ಕೇಳಿಬರುತ್ತಲೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಭ್ ಪಂತ್ ಗೆ ಚಾನ್ಸ್ ಕೊಡಲು ಕೆಎಲ್ ರಾಹುಲ್ ಗೆ ರೆಸ್ಟ್ ಡ್ರಾಮಾ: ಫ್ಯಾನ್ಸ್ ಆಕ್ರೋಶ