Select Your Language

Notifications

webdunia
webdunia
webdunia
webdunia

ಟೆಸ್ಟ್ ನಲ್ಲಿ ಹೋದ ಮಾನ ಏಕದಿನದಲ್ಲಿ ಪಡೆಯುವುದೇ ಶ್ರೀಲಂಕಾ?

ಟೆಸ್ಟ್ ನಲ್ಲಿ ಹೋದ ಮಾನ ಏಕದಿನದಲ್ಲಿ ಪಡೆಯುವುದೇ ಶ್ರೀಲಂಕಾ?
ಕೊಲೊಂಬೊ , ಭಾನುವಾರ, 20 ಆಗಸ್ಟ್ 2017 (08:56 IST)
ಕೊಲೊಂಬೊ: ಟೀಂ ಇಂಡಿಯಾ ವಿರುದ್ಧ ಆಡುವುದೆಂದರೆ ಇತ್ತೀಚೆಗಿನ ದಿನಗಳಲ್ಲಿ ಪ್ರಬಲ ತಂಡಗಳೇ ಹಿಂದೆ ಮುಂದೆ ನೋಡುತ್ತಿದೆ. ಅಂತಹದ್ದರಲ್ಲಿ ಪ್ರಮುಖ, ಪ್ರತಿಭಾವಂತರ ಕೊರತೆ ಅನುಭವಿಸುತ್ತಿರುವ ಶ್ರೀಲಂಕಾ ಯಾವ ಲೆಕ್ಕ?


 
ಹಾಗಂತ ನಾವು ಅಂದುಕೊಂಡರೆ ತಪ್ಪಾಗುತ್ತದೆ. ಉದಾಹರಣೆಗೆ ವೆಸ್ಟ್ ಇಂಡೀಸ್ ತಂಡವನ್ನೇ ನೋಡಿ. ಆ ತಂಡ, ಸುದೀರ್ಘ ಮಾದರಿಯಲ್ಲಿ ಇತ್ತೀಚೆಗೆ ಭೂಪಟದಲ್ಲೇ ಇಲ್ಲವೇನೋ ಎಂಬಷ್ಟು ಧೂಳೀಪಟವಾಗಿದೆ. ಹಾಗಿದ್ದರೂ, ಕಿರು ಮಾದರಿಯ ಕ್ರಿಕೆಟ್ ನಲ್ಲಿ ಪ್ರಭಾವ ಉಳಿಸಿಕೊಂಡಿದೆ.

ಅದು ಸೀಮಿತ ಓವರ್ ಗಳ ಪಂದ್ಯದ ಶಕ್ತಿ. ಅದೇ ವಿಶ್ವಾಸದಲ್ಲಿ ಶ್ರೀಲಂಕಾ ತಂಡವೂ ಇಂದಿನಿಂದ ಆರಂಭವಾಗುತ್ತಿರುವ ಏಕದಿನ ಸರಣಿಯಲ್ಲಿ ಭಾರತವನ್ನು ಎದುರಿಸುತ್ತಿದೆ. ಟೆಸ್ಟ್ ಸರಣಿಯಲ್ಲಿ ಯಾವುದೇ ಹಂತದಲ್ಲೂ ನಂ.1 ತಂಡಕ್ಕೆ ಎದೆಯೊಡ್ಡಿ ನಿಲ್ಲಲಾಗದೇ ಲಂಕಾ ಸೋತು ಶರಣಾಗಿತ್ತು.

ಆದರೆ ಏಕದಿನ ಪಂದ್ಯಕ್ಕೆ ಹೊಸ ನಾಯಕ ಉಪುಲ್ ತರಂಗಾ ಅದೃಷ್ಟ ತಂದಾರೆಂಬ ನಿರೀಕ್ಷೆಯಲ್ಲಿದೆ. ಕಳೆದ ಕೆಲವು ತಿಂಗಳಿನಿಂದ ಗಾಯಾಳುಗಳದ್ದೇ ಚಿಂತೆಯಲ್ಲಿ ಲಂಕಾ ಮುಳುಗಿದೆ. ಹೀಗಾಗಿ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲು ಅದಕ್ಕೆ ಸಾಧ್ಯವಾಗುತ್ತಿಲ್ಲ.

ಆದರೆ ಭಾರತ ಹಾಗಲ್ಲ.ಒಂದು ವೇಳೆ ಯಾವುದೇ ಆಟಗಾರ ಗಾಯಗೊಂಡರೂ ಅವರ ಸ್ಥಾನವನ್ನು ತುಂಬ ಬಲ್ಲ ಸಮರ್ಥ ಪಡೆ ಟೀಂ ಇಂಡಿಯಾದ್ದು. ಏಕದಿನ ಸರಣಿಗೆ ಸ್ಪಿನ್ ಧ್ವಯರಾದ ಜಡೇಜಾ-ಅಶ್ವಿನ್ ಅನುಪಸ್ಥಿತಿ ತಂಡಕ್ಕೆ ಎಳ್ಳಷ್ಟೂ ಕಾಡದು. ಯಜುವೇಂದ್ರ ಚಾಹಲ್ ರಂತಹ ಯುವ ಪಡೆ ತಮ್ಮ ಕೈ  ಚಳಕ ತೋರಲು ಉತ್ಸುಕವಾಗಿದೆ. ಹಾಗಾಗಿ ಈ ಸರಣಿಯೂ ಭಾರತಕ್ಕೆ ಸುಲಭ ತುತ್ತಾಗಬಹುದು ಎಂದೇ ನಿರೀಕ್ಷಿಸಲಾಗಿದೆ.

ಪಂದ್ಯ ನಡೆಯುವ ಸ್ಥಳ: ದಂಬುಲಾ ಮೈದಾನ
ಸಮಯ: ಮಧ್ಯಾಹ್ನ 2.30 ಕ್ಕೆ

ಇದನ್ನೂ ಓದಿ.. ಅನುಷ್ಕಾ ಮೇಲೆ ಪ್ಯಾರ್ ಆದಾಗಲೆಲ್ಲಾ ವಿರಾಟ್ ಕರೆಯೋದು ಹೇಗೆ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಮೇಲೆ ಪ್ಯಾರ್ ಆದಾಗಲೆಲ್ಲಾ ವಿರಾಟ್ ಕರೆಯೋದು ಹೇಗೆ ಗೊತ್ತಾ?