Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ವಿಂಡೀಸ್ ಕೋಚ್ ತಮಾಷೆಯ ಐಡಿಯಾ!

ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ವಿಂಡೀಸ್ ಕೋಚ್ ತಮಾಷೆಯ ಐಡಿಯಾ!
ಹೈದರಾಬಾದ್ , ಗುರುವಾರ, 5 ಡಿಸೆಂಬರ್ 2019 (10:10 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಇದಕ್ಕೂ ಮೊದಲು ಪ್ರವಾಸಿ ತಂಡದ ಕೋಚ್ ಸಿಮನ್ಸ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.


ಈ ವೇಳೆ ಪತ್ರಕರ್ತರೊಬ್ಬರು ಸಿಮನ್ಸ್ ಗೆ ರನ್ ಮೆಷಿನ್ ಕೊಹ್ಲಿಯನ್ನು ಎದುರಿಸಲು ವಿಶೇಷ ಸಿದ್ಧತೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಿಮನ್ಸ್ ತಮಾಷೆಯಾಗಿ ಉತ್ತರಿಸಿದ್ದಾರೆ.

‘ಹೌದು, ನಾವು ಕೊಹ್ಲಿಗೆ ಸ್ಟಂಪ್ ನಿಂದ ಬ್ಯಾಟ್ ಮಾಡಲು ಹೇಳಬೇಕು. ಇಲ್ಲವೇ ಒಂದು ಪುಸ್ತಕದಲ್ಲಿ ಸಹಿ ಹಾಕಿ ಏಕದಿನ ಪಂದ್ಯಗಳಲ್ಲಿ ನೂರು ಬಾಲ್ ನಿಮಗೆ ಉಳಿದದ್ದು ಬೇರೆ ಬ್ಯಾಟ್ಸ್ ಮನ್ ಗಳಿಗೆ ಎಸೆಯುತ್ತೇವೆ ಎನ್ನುತ್ತೇವೆ’ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಬಳಿಕ ಮಾತನಾಡಿದ ಅವರು ಮುಖ್ಯವಾಗಿ ಕೊಹ್ಲಿ ಬಗ್ಗೆ ನಮ್ಮ ಬೌಲರ್ ಗಳು ಭಯಪಡದಂತೆ ನೋಡಿಕೊಳ್ಳಬೇಕು ಮತ್ತು ಖರಾರುವಾಕ್ ಆಗಿ ಬೌಲಿಂಗ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಹಾಡ್ತಾರೆ...! ಎಲ್ರೂ ಕಿವಿ ಮುಚ್ಕೊಳ್ರಪ್ಪೋ...!!