ಗೌತಮ್ ಗಂಭೀರ್, ರೋಹಿತ್ ಶರ್ಮಾ ವಿಚಾರಗಳನ್ನು ಮೀಡಿಯಾಗೆ ಬಿಟ್ಟ ಕ್ರಿಕೆಟಿಗ ಯಾರು ಎಂದು ಪತ್ತೆ

Krishnaveni K
ಗುರುವಾರ, 16 ಜನವರಿ 2025 (10:00 IST)
ಮುಂಬೈ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ವಾಗ್ವಾದ ನಡೆದಿತ್ತು ಎಂದು ಸುದ್ದಿಯಾಗಿತ್ತು. ಈ ವಿಚಾರಗಳನ್ನು ಮಾಧ್ಯಮಗಳಿಗೆ ಬಿಟ್ಟುಕೊಟ್ಟಿದ್ದು ಯಾರು ಎಂದು ಈಗ ಬಹಿರಂಗವಾಗಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಟಿಗರ ವೈಫಲ್ಯದ ಬಗ್ಗೆ ಕೋಚ್ ಗಂಭೀರ್ ಕೆಂಡಾಮಂಡಲರಾಗಿದ್ದರು. ಅದರಲ್ಲೂ ಮೆಲ್ಬೊರ್ನ್ ಟೆಸ್ಟ್ ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಅವರು ನಾಯಕ ರೋಹಿತ್ ಸೇರಿದಂತೆ ಕ್ರಿಕೆಟಿಗರ ಜೊತೆ ಕೂಗಾಡಿದ್ದರು ಎಂದು ವರದಿಯಾಗಿತ್ತು.

ಹಾಗಿದ್ದರೆ ತಂಡದ ಆಂತರಿಕ ವಿಚಾರಗಳನ್ನು ಹೊರಗೆ ಬಿಟ್ಟುಕೊಟ್ಟಿದ್ದು ಯಾರು ಎಂದು ಎಲ್ಲರಿಗೂ ಅನುಮಾನ ಮೂಡಿತ್ತು. ಆದರೆ ಈಗ ಮಾಧ್ಯಮಗಳಿಗೆ ವಿಚಾರ ಸೋರಿಕೆ ಮಾಡಿದ ಕ್ರಿಕೆಟಿಗ ಯಾರು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಕ್ರಿಕೆಟಿಗ ಸರ್ಫರಾಜ್ ಖಾನ್ ಈ ವಿಚಾರಗಳನ್ನು ಬಟಾಬಯಲು ಮಾಡಿದ್ದರು ಎನ್ನಲಾಗುತ್ತಿದೆ. ಖಾಸಗಿ ವಾಹಿನಿಯೊಂದು ಈ ವಿಚಾರವನ್ನು ವರದಿ ಮಾಡಿದೆ. ಆದರೆ ನಿಜವಾಗಿಯೂ ಸರ್ಫರಾಜ್ ಮೂಲಕವೇ ವಿವರಗಳು ಹೊರಗೆ ಬಂದಿದೆಯೇ ಎನ್ನುವುದು ಖಚಿತವಾಗಿಲ್ಲ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI test: ದಿನವಿಡೀ ವೆಸ್ಟ್ ಇಂಡೀಸ್ ಬೌಲರ್ ಗಳ ಬೆವರಿಳಿಸಿದ ಟೀಂ ಇಂಡಿಯಾ ಬ್ಯಾಟಿಗರು

ಡೈವರ್ಸ್‌ ಬೆನ್ನಲ್ಲೇ ಹೊಸ ಗೆಳತಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಹಾರ್ದಿಕ್‌ ಪಾಂಡ್ಯ

Video: ಡೆಲ್ಲಿಯಲ್ಲೂ ಕೆಎಲ್ ರಾಹುಲ್ ಹವಾ ಜೋರು, ಕ್ಲಾಸ್ ಬಂಕ್ ಮಾಡ್ತೀವಿ ಎಂದ ಹುಡುಗರು

IND vs SA: ರಿಷಬ್ ಪಂತ್ ರಂತೆ ಮಾಡಲು ಹೋದ ರಿಚಾ ಘೋಷ್: ಸಿಟ್ಟಾದ ದಕ್ಷಿಣ ಆಫ್ರಿಕಾ ಬ್ಯಾಟಿಗರು

IND vs WI: ಟಾಸ್ ಗೆದ್ದ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ

ಮುಂದಿನ ಸುದ್ದಿ
Show comments