Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ, ಗೌತಮ್ ಗಂಭೀರ್ ಗೆ ಬಿಸಿಸಿಐ ಬುಲವ್: ವಿಷ್ಯ ಸ್ವಲ್ಪ ಸೀರಿಯಸ್

Rohit Sharma-Gautam Gambhir

Krishnaveni K

ಮುಂಬೈ , ಶನಿವಾರ, 11 ಜನವರಿ 2025 (13:43 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್ ಗಂಭೀರ್ ಗೆ ಬಿಸಿಸಿಐ ಬುಲಾವ್ ನೀಡಿದ್ದು ಗಂಭೀರ ವಿಚಾರ ಚರ್ಚೆ ನಡೆಸಲಿದೆ.

ಗೌತಮ್ ಗಂಭೀರ್ ಕೋಚ್ ಆದಾಗಿನಿಂದ ತಂಡದ ಪ್ರದರ್ಶನ ತಳಮಟ್ಟ ತಲುಪಿದೆ. ಅದಕ್ಕೆ ಇತ್ತೀಚೆಗೆ ನಡೆದ ಎರಡು ಟೆಸ್ಟ್ ಸರಣಿಗಳಲ್ಲಿ ಕಂಡ ಹೀನಾಯ ಸೋಲು ನಿದರ್ಶನ. ಮುಂದೆ ಇಂಗ್ಲೆಂಡ್ ವಿರುದ್ಧ ಟಿ20, ಏಕದಿನ ಸರಣಿ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿದೆ.

ನಾಳೆ ಈ ಎರಡೂ ಟೂರ್ನಿಗಳಲ್ಲಿ ಟೀಂ ಇಂಡಿಯಾ ಪ್ರಕಟವಾಗಲಿದೆ. ಅದಕ್ಕೆ ಮೊದಲು ನಾಯಕ ರೋಹಿತ್ ಮತ್ತು ಗಂಭೀರ್ ಗೆ ಬಿಸಿಸಿಐ ಬುಲಾವ್ ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರ ಜೊತೆ ಬಿಸಿಸಿಐ ಕೆಲವು ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಾಧ್ಯತೆಯಿದೆ.

ಹಿರಿಯ ಕ್ರಿಕೆಟಿಗರಾದ ರೋಹಿತ್, ಕೊಹ್ಲಿ, ಜಡೇಜಾ ಮುಂತಾದವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅದರಲ್ಲೂ ರೋಹಿತ್, ಕೊಹ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ನಿವೃತ್ತಿ ವಿಚಾರವೂ ಚರ್ಚೆಯಾಗುವ ಸಾಧ್ಯತೆಯಿದೆ. ರೋಹಿತ್ ಗೆ ನಿವೃತ್ತಿಗೆ ಗಡುವು ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.  ಜೊತೆಗೆ ತಂಡಕ್ಕೆ ಆಟಗಾರರ ಆಯ್ಕೆ ವಿಚಾರದಲ್ಲೂ ಇಬ್ಬರ ಅಭಿಪ್ರಾಯ ಕೇಳಬಹುದು. ಒಟ್ಟಿನಲ್ಲಿ ಈ ಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

Ravindra Jadeja: ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಸೂಚನೆ ನೀಡಿದ ರವೀಂದ್ರ ಜಡೇಜಾ