Select Your Language

Notifications

webdunia
webdunia
webdunia
webdunia

ಕಳಪೆ ಫಾರ್ಮ್, ಸತತ ಸೋಲು ಆದ್ರೂ ಗೌತಮ್ ಗಂಭೀರ್, ಕೊಹ್ಲಿ, ರೋಹಿತ್ ಗೆ ನೋ ಪ್ರಾಬ್ಲಂ

Rohit Sharma-Gambhir

Krishnaveni K

ಮುಂಬೈ , ಬುಧವಾರ, 8 ಜನವರಿ 2025 (11:20 IST)
ಮುಂಬೈ: ಟೀಂ ಇಂಡಿಯಾ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ ಕೋಚ್ ಗೌತಮ್ ಗಂಭೀರ್ ಗೆ ಮುಂದಿನ ದಿನಗಳಲ್ಲೂ ತಂಡದಲ್ಲಿ ಸ್ಥಾನ ಸಿಗುವುದು ಪಕ್ಕಾ ಎನ್ನಲಾಗಿದೆ.

ಮುಂದೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿ ನಡೆಯಲಿದೆ. ಈ ಎರಡೂ ಸರಣಿಗಳಲ್ಲೂ ಕೊಹ್ಲಿ, ರೋಹಿತ್ ಆಡುವುದು ಖಚಿತ ಎನ್ನಲಾಗಿದೆ. ಇಬ್ಬರ ಸ್ಥಾನ ಅಬಾಧಿತವಾಗಿರಲಿದೆ. ಜೊತೆಗೆ ಕೋಚ್ ಗೌತಮ್ ಗಂಭೀರ್ ಗೂ ಸತತ ವೈಫಲ್ಯದ ಹೊರತಾಗಿಯೂ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಬಿಸಿಸಿಐ ಅವಕಾಶ ನೀಡಲಿದೆ.

ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದರೆ ಈ ಮೂವರಿಗೂ ಬಿಸಿಸಿಐ ಗೇಟ್ ಪಾಸ್ ನೀಡಬಹುದು ಎನ್ನಲಾಗುತ್ತಿತ್ತು. ಅದರಲ್ಲೂ ಕೊಹ್ಲಿ, ರೋಹಿತ್ ಈ ಸರಣಿಯಲ್ಲೂ ವಿಫಲರಾದರೆ ನಿವೃತ್ತಿಯಾಗಬಹುದು ಎನ್ನಲಾಗಿತ್ತು. ಆದರೆ ಅದೆಲ್ಲಾ ಸುಳ್ಳಾಗಿದೆ. ಆಸೀಸ್ ಸರಣಿಯ ಕಳಪೆ ಪ್ರದರ್ಶನದ ಹೊರತಾಗಿಯೂ ಈ ಕ್ರಿಕೆಟಿಗರಿಗೆ ಯಾವುದೇ ಶಾಸ್ತಿ ಮಾಡದಿರಲು ಬಿಸಿಸಿಐ ತೀರ್ಮಾನಿಸಿದೆ.

ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಗೂ ರೋಹಿತ್ ಅವರೇ ತಂಡದ ನಾಯಕರಾಗಲಿದ್ದಾರೆ. ಈ ಕ್ರಿಕೆಟಿಗರು ಇಂಗ್ಲೆಂಡ್ ಸರಣಿಗೂ ತಂಡದಲ್ಲಿರುವುದು ಖಚಿತವಾಗಿದೆ. ಇತ್ತ ಗಂಭೀರ್ ಅವರ ಕೋಚ್ ಹುದ್ದೆಯನ್ನೂ ಕಿತ್ತುಕೊಳ್ಳದೇ ಇರಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೇನೂ ಎಕ್ಸ್ ಟ್ರಾ ಕೊಂಬಿಲ್ಲ: ಆಸ್ಟ್ರೇಲಿಯಾ ಸರಣಿ ನಡುವೆಯೇ ಬಂದಿತ್ತು ಕೊಹ್ಲಿ, ರೋಹಿತ್ ಗೆ ಸಂದೇಶ