Daily Horoscope
✕

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಘೋಷಣೆ ಯಾವಾಗ, ಈ ಕ್ರಿಕೆಟಿಗರಿಗೆ ಕೊಕ್ ನೀಡುತ್ತಾ

Krishnaveni K
ಸೋಮವಾರ, 6 ಜನವರಿ 2025 (11:14 IST)
ಮುಂಬೈ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಟೀಂ ಇಂಡಿಯಾ ಘೋಷಣೆ ಯಾವಾಗ ಮತ್ತು ಯಾವ ಸ್ಟಾರ್ ಕ್ರಿಕೆಟಿಗರಿಗೆ ಆಯ್ಕೆ ಸಮಿತಿ ಕೊಕ್ ನೀಡುತ್ತೆ ಎಂಬ ಕುತೂಹಲ ಎಲ್ಲರಲ್ಲಿದೆ.

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ಈಗ ಫಾರ್ಮ್ ನಲ್ಲಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸೋಲು ಅನುಭವಿಸಿದ ಮೇಲೆ ಆಡದ ಸ್ಟಾರ್ ಕ್ರಿಕೆಟಿಗರಿಗೆ ಮುಲಾಜಿಲ್ಲದೇ ಕೊಕ್ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.

ಹೀಗಾಗಿ ಆಯ್ಕೆ ಸಮಿತಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಮಾಡುತ್ತಾ ನೋಡಬೇಕಿದೆ. ಸದ್ಯಕ್ಕೆ ರೋಹಿತ್, ಕೊಹ್ಲಿ ಜೊತೆಗೆ ರಿಷಭ್ ಪಂತ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.

ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ನಡೆಯಲಿದೆ. ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ಪಂದ್ಯ ನಡೆಯುತ್ತಿದೆ. ಭಾರತ ಆಡುವ ಪಂದ್ಯಗಳು ಮಾತ್ರ ಯುಎಇನಲ್ಲಿ ನಡೆಯಲಿದೆ. ಜನವರಿ 12 ರ ಒಳಗಾಗಿ ಎಲ್ಲಾ ತಂಡಗಳೂ ತಮ್ಮ ತಂಡವನ್ನು ಪ್ರಕಟಿಸಬೇಕಾಗಿದೆ. ಅದರಂತೆ ಟೀಂ ಇಂಡಿಯಾ ಜನವರಿ 11 ರಂದು ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ, ರೋಹಿತ್ ಗೆ ನಾಯಕತ್ವದಿಂದ ಕೊಕ್ ನೀಡಲಾಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ 2nd T20: ನಂಬಲಸಾಧ್ಯ ಗೆಲುವು ದಾಖಲಿಸಿದ ಟೀಂ ಇಂಡಿಯಾ, ತಿಲಕ್ ವರ್ಮ, ನಮನ್ ಧೀರ್ ಮ್ಯಾಜಿಕ್

ಭಾರತ vs ನ್ಯೂಜಿಲ್ಯಾಂಡ್ 2ನೇ T20: ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಟೀಮ್ ಇಂಡಿಯಾ

IND vs NZ: ಆಡುವ ಅವಕಾಶವಿಲ್ಲ ಎಂದರೂ ದೇವರೇ ವೈಭವ್ ಸೂರ್ಯವಂಶಿಗೆ ಒಂದು ಅವಕಾಶ ಮಾಡಿಕೊಡ್ತಿದ್ದಾನೆ..

IND vs NZ 1st T20: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 4 ವಿಕೆಟ್‌ಗಳ ರೋಚಕ ಜಯ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂದು; ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ಮುಂದಿನ ಸುದ್ದಿ
Show comments