Webdunia - Bharat's app for daily news and videos

Install App

ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತಕ್ಕೆ ಡಬಲ್‌ ಆಘಾತ: ಡಬ್ಲ್ಯುಟಿಸಿ ರೇಸ್‌ನಿಂದಲೂ ಟೀಂ ಇಂಡಿಯಾ ಔಟ್‌

Sampriya
ಭಾನುವಾರ, 5 ಜನವರಿ 2025 (13:40 IST)
ಸಿಡ್ನಿ: ಇಲ್ಲಿನ ಕ್ರಿಕೆಟ್​ ಮೈದಾನದಲ್ಲಿ ನಡೆದ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ಅಂತಿಮ ಪಂದ್ಯದಲ್ಲಿ 6 ವಿಕೆಟ್​​ಗಳಿಂದ ಭಾರತ ತಂಡ ಸೋತು ಸರಣಿಯನ್ನು ಕಳೆದುಕೊಂಡಿರುವುದು ಒಂದೆಡೆಯಾದರೆ, ಮತ್ತೊಂಡೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​​ ಫೈನಲ್​​ ರೇಸ್​ನಿಂದಲೂ ಟೀಂ ಇಂಡಿಯಾ ಹೊರಬಿತ್ತು.

ಕೊನೆಯ ಟೆಸ್ಟ್‌ನಲ್ಲಿ ಆರು ವಿಕೆಟ್ ಗೆಲುವಿನೊಂದಿಗೆ​ ಕಾಂಗರೂ ಪಡೆ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್​ ಆಗಿರುವ ಪ್ಯಾಟ್​ ಕಮಿನ್ಸ್​ ಪಡೆ ಫೈನಲ್​ ಹಣಾಹಣಿಯಲ್ಲಿ ಈಗಾಗಲೇ ಅಂತಿಮ ಹಂತಕ್ಕೇರಿರುವ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

ಆಸ್ಟ್ರೇಲಿಯಾ ತಂಡ 2014-15ರಲ್ಲಿ ತವರಿನಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1ರಿಂದ ತನ್ನದಾಗಿಸಿಕೊಂಡಿತು. 10 ವರ್ಷಗಳ ಹಿಂದೆ ಆಸೀಸ್​ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸಿತ್ತು. ಅಂದಿನಿಂದ, ಆಸ್ಟ್ರೇಲಿಯಾ ಕೈಗೊಂಡ ಎರಡು ವಿದೇಶ ಪ್ರವಾಸಗಳು ಸೇರಿದಂತೆ ಎರಡು ರಾಷ್ಟ್ರಗಳ ನಡುವೆ ಆಡಿದ ಎಲ್ಲಾ ನಾಲ್ಕು ಸರಣಿಗಳಲ್ಲೂ ಭಾರತವೇ ಗೆದ್ದು ಬೀಗಿತ್ತು.

ಜಸ್ಪ್ರೀತ್​ ಬುಮ್ರಾ ನಾಯಕತ್ವದಲ್ಲಿ ನಡೆದ ಪರ್ತ್ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಪ್ರತಿಷ್ಠಿತ ಸರಣಿಯನ್ನು ಆರಂಭಿಸಿದ್ದ ಭಾರತ ಬಳಿಕ ರೋಹಿತ್​ ಶರ್ಮಾ ಮುಂದಾಳತ್ವದಲ್ಲಿ ಎರಡು ಪಂದ್ಯ ಸೋತು, ಒಂದು ಮ್ಯಾಚ್​ ಡ್ರಾ ಮಾಡಿಕೊಂಡಿತ್ತು. ಸಿಡ್ನಿ ಟೆಸ್ಟ್​ನಲ್ಲಿ ಮರಳಿ ನಾಯಕನಾದ ಬುಮ್ರಾ ಗಾಯಗೊಂಡು ಬೌಲಿಂಗ್​ ಮಾಡದಿರುವುದು ಭಾರತಕ್ಕೆ ಹಿನ್ನಡೆಯಾಯಿತು. ಆರಂಭಿಕ ಸೋಲಿನ ಬಳಿಕ ಸರಣಿಯಲ್ಲಿ ಭರ್ಜರಿ ಕಮ್​ಬ್ಯಾಕ್​​ ಮಾಡಿದ ಕಾಂಗರೂ ಪಡೆ, 3-1ರಿಂದ ಭಾರತವನ್ನು ಮಣಿಸಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Virat Kohli video: ಸದ್ಯ ನೀವು ಔಟಾಗಿದ್ದೇ ಒಳ್ಳೇದಾಯ್ತು.. ಕಾಂತಾರ ಸೆಲೆಬ್ರೇಷನ್ ಮಾಡಿದ್ದ ಕೊಹ್ಲಿಗೆ ಕೆಎಲ್ ರಾಹುಲ್ ಹೇಳಿದ್ದೇನು ಬಹಿರಂಗ

Rahul Dravid: ಐಪಿಎಲ್ ನ ಅತೀ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ: ವೀಲ್ ಚೇರ್ ನಿಂದ ಎದ್ದೇಬಿಟ್ಟ ದ್ರಾವಿಡ್

RR vs GT Match:ಅಗ್ರಸ್ಥಾನದ ಮೇಲೆ ಕಣ್ಣಿಟ್ಟ ಗುಜರಾತ್‌ನಿಂದ ರಾಜಸ್ಥಾನ್‌ಗೆ ಬಿಗ್‌ ಟಾರ್ಗೆಟ್‌

RCB vs CSK Match:ಖುಷಿಯಲ್ಲಿರುವ ಆರ್‌ಸಿಬಿ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ನ್ಯೂಸ್‌

ಮಗನ ವಿಷಯಕ್ಕೆ ಬಂದ ನೆಟ್ಟಿಗರಿಗೆ ಸಖತ್ ಕ್ಲಾಸ್ ತೆಗೆದುಕೊಂಡ ಬುಮ್ರಾ ಪತ್ನಿ ಸಂಜನಾ

ಮುಂದಿನ ಸುದ್ದಿ
Show comments