ಮುಂಬೈ: ಪಾಲಾಶ್ ಮುಚ್ಚಲ್ ಜೊತೆ ಮದುವೆ ಮುರಿದುಕೊಂಡ ಬೆನ್ನಲ್ಲೇ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಅವರ ವೃತ್ತಿ ಜೀವನದ ಗೆಳೆಯರು ಮಾಡಿದ್ದೇನು ಗೊತ್ತಾ?
ಪಾಲಾಶ್ ಮುಚ್ಚಲ್ ಜೊತೆ ನವಂಬರ್ 23 ರಂದು ಸ್ಮೃತಿ ಮದುವೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸ್ಮೃತಿ ತಂದೆಗೆ ಹೃದಯಾಘಾತವಾಗಿದೆ ಎಂದು ಮದುವೆ ರದ್ದಾಗಿದೆ ಎನ್ನಲಾಗಿತ್ತು. ಆದರೆ ಈಗ ನಾನಾ ಕಾರಣಗಳಿಗೆ ಮದುವೆಯೇ ರದ್ದಾಗಿದೆ. ಇಬ್ಬರೂ ಮದುವೆಯಾಗದೇ ಇರಲು ತೀರ್ಮಾನಿಸಿದ್ದಾರೆ.
ಇದರ ಬೆನ್ನಲ್ಲೇ ಸ್ಮೃತಿ ಮಂಧಾನ ತಮ್ಮ ಬಹುಕಾಲದ ಗೆಳೆಯನ ಜೊತೆಗಿದ್ದ ಎಲ್ಲಾ ಸಂಪರ್ಕಗಳನ್ನೂ ಕಡಿದುಕೊಂಡಿದ್ದಾರೆ. ಸ್ಮೃತಿ ಇನ್ ಸ್ಟಾಗ್ರಾಂನಿಂದ ಪಾಲಾಶ್ ರನ್ನು ಅನ್ ಫಾಲೋ ಮಾಡಿದ್ದಾರೆ. ಪಾಲಾಶ್ ಕೂಡಾ ಅನ್ ಫಾಲೋ ಮಾಡಿಕೊಂಡಿದ್ದಾರೆ. ಪಾಲಾಶ್ ಜೊತೆಗಿದ್ದ ಎಲ್ಲಾ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಿಂದ ಸ್ಮೃತಿ ಡಿಲೀಟ್ ಮಾಡಿಕೊಂಡಿದ್ದಾರೆ.
ಕೇವಲ ಸ್ಮೃತಿ ಮಾತ್ರವಲ್ಲ, ಅವರ ಸ್ನೇಹಿತೆಯರಾದ ಕ್ರಿಕೆಟ್ ಆಟಗಾರ್ತಿ ಜೆಮಿಮಾ ಕೂಡಾ ಅನ್ ಫಾಲೋ ಮಾಡಿದ್ದಾರೆ. ಆರುಂಧತಿ ರೆಡ್ಡಿ, ರಾಧಾ ಯಾದವ್ ಕೂಡಾ ಅನ್ ಫಾಲೋ ಮಾಡಿದ್ದರು. ಇತ್ತ ಪಾಲಾಶ್ ಮಾತ್ರವಲ್ಲ ಅವರ ಸಹೋದರಿ ಪಾಲಕ್ ಮುಚ್ಚಲ್ ಅವರನ್ನೂ ಕೂಡಾ ಸ್ಮೃತಿ ಅನ್ ಫಾಲೋ ಮಾಡಿಕೊಂಡಿದ್ದಾರೆ.