Publish Date: Wed, 19 Jul 2023 (08:10 IST)
Updated Date: Wed, 19 Jul 2023 (08:53 IST)
ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ವಿರುದ್ಧ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ವೆಸ್ಟ್ ಇಂಡೀಸ್ ಈಗ ದ್ವಿತೀಯ ಟೆಸ್ಟ್ ಪಂದ್ಯ ಗೆಲ್ಲಲು ಪ್ರಯತ್ನ ನಡೆಸಿದೆ.
ವಿಂಡೀಸ್ ಕಳೆದ ಟೆಸ್ಟ್ ನಲ್ಲಿ ಭಾರತೀಯ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರ ದಾಳಿಗೆ ನಲುಗಿತ್ತು. ಈಗ ಟೀಂ ಇಂಡಿಯಾ ವಿರುದ್ಧ ಗೆಲ್ಲಲು ಯೋಜನೆ ರೂಪಿಸಿರುವ ವಿಂಡೀಸ್ ಅದೇ ಸ್ಪಿನ್ ಅಸ್ತ್ರ ರೆಡಿ ಮಾಡಿದೆ.
ಭಾರತದ ವಿರುದ್ಧ ದ್ವಿತೀಯ ಟೆಸ್ಟ್ ಗೆ ಹೊಸ ಪ್ರತಿಭೆ ಕೆವಿನ್ ಸಿಂಕ್ಲೈರ್ ಗೆ ಅವಕಾಶ ನೀಡಲಾಗಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ರೇಮನ್ ರೀಫರ್ ನ್ನು ತಂಡದಿಂದ ರಿಲೀಸ್ ಮಾಡಲಾಗಿದೆ.