Publish Date: Tue, 18 Jul 2023 (16:04 IST)
Updated Date: Tue, 18 Jul 2023 (16:10 IST)
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸದ್ಯದಲ್ಲೇ ತಂಡಕ್ಕೆ ಮರಳಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಸ್ವತಃ ಅವರೇ ಆ ಸುದ್ದಿಗಳನ್ನು ಖಚಿತಪಡಿಸಿದ್ದಾರೆ.
ಬುಮ್ರಾ ಬೆನ್ನು ನೋವಿನಿಂದಾಗಿ ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ಇದೀಗ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಪ್ರತಿ ನಿತ್ಯ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಹೀಗಾಗಿ ಏಷ್ಯಾ ಕಪ್ ವೇಳೆಗೆ ಅವರು ತಂಡಕ್ಕೆ ಪುನರಾಗಮನ ಮಾಡಬಹುದು ಎನ್ನಲಾಗಿತ್ತು.
ಇದೀಗ ಸ್ವತಃ ಬುಮ್ರಾ ತಮ್ಮ ವರ್ಕೌಟ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು, ನಾನು ಕಮ್ ಬ್ಯಾಕ್ ಮಾಡ್ತಾ ಇದ್ದೀನಿ ಎಂದಿದ್ದಾರೆ.