Publish Date: Tue, 18 Jul 2023 (08:20 IST)
Updated Date: Tue, 18 Jul 2023 (08:48 IST)
ಬೆಂಗಳೂರು: ಐಪಿಎಲ್ ನಲ್ಲಿ ಬಹುತೇಕ ಎಲ್ಲಾ ಫ‍್ರಾಂಚೈಸಿಗಳು ಈಗ ತರಬೇತಿ ಸಿಬ್ಬಂದಿಗಳ ಬದಲಾವಣೆ ಮಾಡುತ್ತಿದ್ದಾರೆ.
ಇದೀಗ ಆರ್ ಸಿಬಿ ತಂಡದಲ್ಲೂ ಬದಲಾವಣೆ ಪರ್ವದ ಮಾತು ಕೇಳಿಬರುತ್ತಿದೆ. ಆರ್ ಸಿಬಿ ತಂಡದ ಮುಖ್ಯ ಕೋಚ್ ಮತ್ತು ಸಹಾಯಕ ಸಿಬ್ಬಂದಿಗಳನ್ನು ಬದಲಾಯಿಸಲು ಮಾಲಿಕರು ತೀರ್ಮಾನಿಸಿದ್ದಾರೆ.
ಮುಂದಿನ ಆವೃತ್ತಿಯಿಂದ ಆರ್ ಸಿಬಿ ಹಾಲಿ ಕೋಚ್ ಮೈಕ್ ಹಸನ್ ಮತ್ತು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಗೆ ಕೊಕ್ ನೀಡಲಾಗಿದೆ . ಯಾಕೋ ಆರ್ ಸಿಬಿಗೆ ಇಷ್ಟು ಆವೃತ್ತಿಗಳಲ್ಲೂ ಕಪ್ ಗೆಲ್ಲುವ ಅದೃಷ್ಟವೇ ಒಲಿದುಬಂದಿಲ್ಲ. ಪುರುಷ ಮಾತ್ರವಲ್ಲ, ಮಹಿಳಾ ಐಪಿಎಲ್ ನಲ್ಲೂ ಸ್ಟಾರ್ ಆಟಗಾರರ ಬಳಗವೇ ಇದ್ದರೂ ಗೆಲ್ಲಲು ಸಾಧ‍್ಯವಾಗಿರಲಿಲ್ಲ. ಇದೀಗ ಪುರುಷರ ಕ್ರಿಕೆಟ್ ತಂಡದ ಕೋಚ್ ಗಳನ್ನು ಬದಲಾಯಿಸಿದರೆ ಆರ್ ಸಿಬಿ ಅದೃಷ್ಟ ಬದಲಾಗುತ್ತಾ? ಕಾದು ನೋಡಬೇಕು.