Publish Date: Tue, 18 Jul 2023 (08:10 IST)
Updated Date: Tue, 18 Jul 2023 (08:44 IST)
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಲಿದೆ.
ಜುಲೈ 20 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ 500 ನೇ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಈ ವಿಶೇಷ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ. ಇದಕ್ಕೆ ಮೊದಲು ಸಚಿನ್ ತೆಂಡುಲ್ಕರ್ 664, ಧೋನಿ 535 ಮತ್ತು ರಾಹುಲ್ ದ್ರಾವಿಡ್ 504 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಖ್ಯಾತಿ ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ 110 ಪಂದ್ಯಗಳನ್ನಾಡಿದರೆ ಏಕದಿನಗಳಲ್ಲಿ 274, 115 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 12898 ರನ್, ಟೆಸ್ಟ್ ಪಂದ್ಯಗಳಲ್ಲಿ 8,555 ರನ್ ಮತ್ತು ಟಿ20 ಪಂದ್ಯಗಳಲ್ಲಿ 4008 ರನ್ ಗಳಿಸಿದ್ದಾರೆ.