ಮುಂಬೈ: ಯಶಸ್ವಿ ಜೈಸ್ವಾಲ್ ಎಂಬ ಯುವ ಪ್ರತಿಭೆ ಈಗ ಟೀಂ ಇಂಡಿಯಾದ ಮೂವರು ಬ್ಯಾಟಿಗರ ಟೆಸ್ಟ್ ಸ್ಥಾನಕ್ಕೆ ಕುತ್ತು ತಂದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುವ ಅವಕಾಶ ಪಡೆದ ಜೈಸ್ವಾಲ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಜೊತೆಗೆ ಮೂವರು ಬ್ಯಾಟಿಗರಿಗೆ ತಲೆನೋವಾಗಿದ್ದಾರೆ.
ಶುಬ್ಮನ್ ಗಿಲ್ ಓಪನರ್ ಆಗಿ ಉತ್ತಮ ದಾಖಲೆ ಹೊಂದಿದ್ದರು. ಆದರೆ ಜೈಸ್ವಾಲ್ ಗಾಗಿ ಅವರು ತಮ್ಮ ಆರಂಭಿಕ ಸ್ಥಾನವನ್ನು ಬಿಟ್ಟುಕೊಡಬೇಕಾಗಿದೆ. ಇದೀಗ 3 ನೇ ಕ್ರಮಾಂಕದಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಇಲ್ಲದೇ ಹೋದರೆ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗದು.
ಸದ್ಯಕ್ಕೆ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಕೆಎಲ್ ರಾಹುಲ್ ಅವಕಾಶಕ್ಕೂ ಜೈಸ್ವಾಲ್ ಅಡ್ಡಗಾಲಾಗಿದ್ದಾರೆ. ಜೈಸ್ವಾಲ್ ಆರಂಭಿಕರಾಗಿ, ಗಿಲ್ ಮೂರನೇ ಕ್ರಮಾಂಕದಲ್ಲಿ ಕ್ಲಿಕ್ ಆದರೆ ರಾಹುಲ್ ಗೆ ಟೆಸ್ಟ್ ತಂಡದಲ್ಲಿ ಅವಕಾಶ ಸಿಗದು. ಹಾಗೊಂದು ವೇಳೆ ಅವರಿಗೆ ಸ್ಥಾನ ಸಿಗಬೇಕಿದ್ದರೆ ಹಿರಿಯ ಬ್ಯಾಟಿಗ ಅಜಿಂಕ್ಯಾ ರೆಹಾನೆ ಫೈಲ್ ಆಗಬೇಕು.
ಇನ್ನೊಬ್ಬ ತಾರೆ ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅವರ ನಾಲ್ಕನೇ ಕ್ರಮಾಂಕ ಈಗಾಗಲೇ ಭರ್ತಿಯಾಗಿದೆ. ಅಯ್ಯರ್ ಗೆ ಮತ್ತೆ ಟೆಸ್ಟ್ ತಂಡದಲ್ಲಿ ಜಾಗವೇ ಇಲ್ಲದಂತಾಗಿದೆ.