ಮುಂಬೈ: ಒಂದು ಕಾಲದಲ್ಲಿ ಜ್ಯೂನಿಯರ್ ಸೆಹ್ವಾಗ್ ಎಂದು ಭರವಸೆ ಮೂಡಿಸಿದ್ದ ಪೃಥ‍್ವಿ ಶಾ ಇತ್ತೀಚೆಗೆ ಟೀಂ ಇಂಡಿಯಾಕ್ಕೆ ಆಯ್ಕೆಯೇ ಆಗುತ್ತಿಲ್ಲ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನನಗೆ ಒಂದೇ ಒಂದು ಚಾನ್ಸ್ ಕೊಡದೇ ತಂಡದಿಂದ ಯಾಕೆ ಹೊರಗಿಟ್ಟರು ಎಂದೇ ಗೊತ್ತಾಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ.
ಕೆಲವರು ಫಿಟ್ನೆಸ್ ಕಾರಣಕ್ಕೆ ಇರಬಹುದು ಎಂದರು. ನಾನು ಎನ್ ಸಿಎಗೆ ತೆರಳಿ ಎಲ್ಲಾ ರೀತಿಯ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ನನ್ನನ್ನು ಆಯ್ಕೆ ಮಾಡಿದರು. ಆದರೆ ಒಂದೇ ಒಂದು ಪಂದ್ಯವಾಡಿಸದೇ ತಂಡದಿಂದ ಹೊರಗಿಟ್ಟರು. ಇದರ ವಿರುದ್ಧ ನಾನು ಯಾರ ಜೊತೆಗೂ ಹೋರಾಡಲು ಆಗುವುದಿಲ್ಲ. ನನಗೆ ಬೇಸರವಾಗಿದ್ದು ನಿಜ ಆದರೆ ಇದನ್ನೆಲ್ಲಾ ಬದಿಗೊತ್ತಿ ಮುಂದೆ ಸಾಗಬೇಕಿದೆ ಎಂದಿದ್ದಾರೆ.