ಮುಂಬೈ: ಟೀಂ ಇಂಡಿಯಾಗೆ ಯುವ ಆಟಗಾರರನ್ನು ಸಿದ್ಧಪಡಿಸಿ ಕೊಡುವ ಬೆಂಗಳೂರಿನ ಎನ್ ಸಿಎಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗ ಭಾರತೀಯ ಕ್ರಿಕೆಟ್ ಸುರಕ್ಷಿತ ಕೈಗಳಲ್ಲಿದೆ. ಟೀಂ ಇಂಡಿಯಾ ಕೋಚ್ ಆಗಿ ದ್ರಾವಿಡ್ ಮತ್ತು ಯುವ ಆಟಗಾರರನ್ನು ತರಬೇತು ಮಾಡುವ ಎನ್ ಸಿಎ ಲಕ್ಷ್ಮಣ್ ಸುಪರ್ದಿಗೊಳಪಡಲಿದೆ. ಇದರಿಂದ ಭಾರತ ಕ್ರಿಕೆಟ್ ಗೆ ಒಳಿತಾಗಲಿದೆ ಎಂದು ಹೇಳಿದ್ದಾರೆ.
ವಿವಿಎಸ್ ಲಕ್ಷ್ಮಣ್ ಗೆ ತಮ್ಮ ಆದಾಯದಲ್ಲಿ ಕಡಿತವಾಗಬಹುದು ಎಂದು ಗೊತ್ತಿದ್ದರೂ ಭಾರತ ಕ್ರಿಕೆಟ್ ನ ಹಿತದೃಷ್ಟಿಯಿಂದ ಎನ್ ಸಿಎ ಹುದ್ದೆ ಒಪ್ಪಿಕೊಂಡರು. ಅವರೀಗ ಹೆಂಡತಿ ಮಕ್ಕಳ ಸಮೇತ ಬೆಂಗಳೂರಿಗೆ ಶಿಫ್ಟ್ ಆಗಬೇಕು. ಅವರ ಮಕ್ಕಳನ್ನು ಬೆಂಗಳೂರಿನ ಶಾಲೆಗೆ ಸೇರಿಸಬೇಕಾಗುತ್ತದೆ. ಇಂತಹ ಎಲ್ಲಾ ಸಮಸ್ಯೆಗಳಿದ್ದರೂ ಭಾರತೀಯ ಕ್ರಿಕೆಟ್ ಹಿತದೃಷ್ಟಿಯಿಂದ ಅವರು ಈ ತ್ಯಾಗಕ್ಕೆ ಸಿದ್ಧವಾಗಿದ್ದಾರೆ ಎಂದು ಗಂಗೂಲಿ ತಮ್ಮ ಹಳೆಯ ಸಹ ಆಟಗಾರನ ಹೊಗಳಿದ್ದಾರೆ.