ಮುಂಬೈ: ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ಆಟಗಾರರ ಬಿಡುವಿಲ್ಲದ ಕ್ರಿಕೆಟ್ ಗಮನದಲ್ಲಿಟ್ಟುಕೊಂಡು ರೊಟೇಷನ್ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಿದೆ.
ಇದೀಗ ಇಂಗ್ಲೆಂಡ್ ಕ್ರಿಕೆಟ್ ಅಳವಡಿಸಿದಂತೆ ತಮ್ಮಲ್ಲೂ ರೊಟೇಷನ್ ಪದ್ಧತಿ ಜಾರಿಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈಗಾಗಲೇ ನ್ಯೂಜಿಲೆಂಡ್ ಸರಣಿಯಿಂದಲೇ ಇದು ಆರಂಭವಾಗಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದ್ದು, ಮಹತ್ವದ ಟೂರ್ನಮೆಂಟ್ ಗಳನ್ನು ಹೊರತುಪಡಿಸಿ ಉಳಿದ ಸರಣಿಗಳಲ್ಲಿ ಬದಲಿ ಆಟಗಾರರಿಗೆ ಅವಕಾಶ ನೀಡಲಾಗುತ್ತದೆ. ಆಟಗಾರರಿಗೆ ಬಲವಂತವಾಗಿ ವಿಶ್ರಾಂತಿ ನೀಡುವ ಬದಲು ಅವರನ್ನೇ ಕೇಳಿ ಅಗತ್ಯ ಬಂದಲ್ಲಿ ವಿಶ್ರಾಂತಿ ನೀಡಲಾಗುತ್ತದೆ. ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.