Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಫೈನಲ್ ಇಂದು: ಕಣದಲ್ಲಿ ಕಿವೀಸ್-ಆಸೀಸ್

ಟಿ20 ವಿಶ್ವಕಪ್
ದುಬೈ , ಭಾನುವಾರ, 14 ನವೆಂಬರ್ 2021 (08:46 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಸರಣಿಯುದ್ದಕ್ಕೂ ಕೂಲ್ ಆಗಿ ಆಡಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಎರಡು ಸಮಬಲದ ತಂಡಗಳು. ಹೀಗಾಗಿ ಈ ಫೈನಲ್ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ನ್ಯೂಜಿಲೆಂಡ್ ಇತ್ತೀಚೆಗಿನ ದಿನಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನವನ್ನೇ ತೋರುತ್ತಿದೆ. ಹೀಗಾಗಿ ಇಲ್ಲೂ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ. ಕಿವೀಸ್ ಗೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಡೆವನ್ ಕಾನ್ವೆ ಅನುಪಸ್ಥಿತಿ ಕಾಡಲಿದೆ. ಆದರೆ ಆರಂಭಿಕ ಡೆರಿಲ್ ಮಿಚೆಲ್, ನಾಯಕ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಾಮ್ ಪ್ರಮುಖ ಆಧಾರ ಸ್ತಂಬಗಳು. ಅತ್ತ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ ಉತ್ತಮ ಫಾರ್ಮ್ ನಲ್ಲಿರುವುದು ಪ್ಲಸ್ ಪಾಯಿಂಟ್. ಉಳಿದಂತೆ ಗ್ಲೆನ್ ಮ್ಯಾಕ್ಸ್ ವೆಲ್, ಸ್ಟಾಯ್ನಿಸ್ ಸಿಡಿದರೆ ಬ್ಯಾಟಿಂಗ್ ಗೆ ಬಲ ಬರುತ್ತದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವ ಬಗ್ಗೆ ರವಿಶಾಸ್ತ್ರಿ ಕೊಟ್ಟ ದೊಡ್ಡ ಸುಳಿವು