Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್: ಸೆಮಿಫೈನಲ್ ನಲ್ಲಿ ಪಾಕ್ ಗರ್ವಭಂಗ ಮಾಡಿದ ಆಸೀಸ್

ಟಿ20 ವಿಶ್ವಕಪ್: ಸೆಮಿಫೈನಲ್ ನಲ್ಲಿ ಪಾಕ್ ಗರ್ವಭಂಗ ಮಾಡಿದ ಆಸೀಸ್
ದುಬೈ , ಶುಕ್ರವಾರ, 12 ನವೆಂಬರ್ 2021 (09:05 IST)
ದುಬೈ: ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ಧ  5 ವಿಕೆಟ್ ಗಳ ಸೋಲು ಅನುಭವಿಸಿ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ.

ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿ ಮೆರೆಯುತ್ತಿದ್ದ ಪಾಕ್ ಗೆ ನಿನ್ನೆಯ ಪಂದ್ಯದಲ್ಲಿ ಮೊದಲ ಸೋಲು ಸಿಕ್ಕಿದೆ. ಇದರೊಂದಿಗೆ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಪಾಕ್ ಕನಸು ಭಗ್ನವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸೀಸ್ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಫೈನಲ್ ಗೆ ಲಗ್ಗೆಯಿಟ್ಟಿತು. ಆಸೀಸ್ ಪರ ಡೇವಿಡ್ ವಾರ್ನರ್ 30 ಎಸೆತಗಳಿಂದ 49 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಕೆಳ ಕ್ರಮಾಂಕದಲ್ಲಿ ಮಾರ್ಕಸ್ ಸ್ಟಾಯ್ನಿಸ್ 31 ಎಸೆತಗಳಿಂದ 40 ರನ್ ಗಳಿಸಿದರೆ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಹಿಗ್ಗಾ ಮುಗ್ಗಾ ಬ್ಯಾಟ್ ಬೀಸಿ 17 ಎಸೆತಗಳಿಂದ 41 ರನ್ ಗಳಿಸಿ ತಂಡದ ಗೆಲುವು ಸುಲಭವಾಗಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದ್ರಾವಿಡ್ ಕೋಚ್ ಆದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ