Publish Date: Wed, 10 Nov 2021 (13:03 IST)
Updated Date: Wed, 10 Nov 2021 (09:04 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೂ ಮೊದಲೇ ಟೀಂ ಇಂಡಿಯಾ ಹೊರಬಿದ್ದಿರುವುದರಿಂದ ಅಭಿಮಾನಿಗಳು ಆಕ್ರೋಶಕ್ಕೊಳಗಾಗಿದ್ದಾರೆ. ಆದರೆ ಇದಕ್ಕೂ ದೊಡ್ಡ ಹೊಡೆತ ಸಿಕ್ಕಿರುವುದು ಆಯೋಜಕರಿಗೆ.
ಭಾರತ ತಂಡ ಆಡುತ್ತದೆ ಎಂದಾದರೆ ಇಡೀ ವಿಶ್ವವೇ ಎದುರು ನೋಡುತ್ತದೆ. ಭಾರತ ಕ್ರಿಕೆಟ್ ಗೆ ಅಭಿಮಾನಿಗಳು ಜಾಸ್ತಿ. ಹೀಗಾಗಿ ಆದಾಯದ ದೃಷ್ಟಿಯಿಂದ ಭಾರತ ಆಡುವ ಪಂದ್ಯಗಳು ಲಾಭಕರ. ಹೀಗಾಗಿ ಸಾಕಷ್ಟು ಜಾಹೀರಾತುದಾರರು ಟೀಂ ಇಂಡಿಯಾ ಆಡುವ ಪಂದ್ಯಗಳಲ್ಲಿ ಜಾಹೀರಾತು ಬುಕ್ ಮಾಡಿಕೊಳ್ಳುತ್ತವೆ.
ಆದರೆ ಈಗ ಅಂತಿಮ ಘಟ್ಟದಲ್ಲಿ ಭಾರತ ತಂಡವೇ ಇಲ್ಲದ ಕಾರಣ ಜಾಹೀರಾತುದಾರರ ಸಂಖ್ಯೆಯೂ ಕಡಿಮೆಯಾಗಿದೆ. ಮೈದಾನಕ್ಕೆ ಬರುವ ಅಭಿಮಾನಿಗಳೂ ಕಡಿಮೆಯಾಗುತ್ತಾರೆ. ಇದು ಆಯೋಜಕರ ಜೇಬಿಗೆ ದೊಡ್ಡ ಹೊರೆಯಾಗಲಿದೆ.