Publish Date: Tue, 09 Nov 2021 (11:38 IST)
Updated Date: Tue, 09 Nov 2021 (09:39 IST)
ಬೆಂಗಳೂರು: ಐಪಿಎಲ್ ನ ಮುಂದಿನ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಆಗಮನವಾಗಲಿದೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದಿದ್ದು ಅವರ ಸ್ಥಾನಕ್ಕೆ ನಾಯಕರಾಗುವವರು ಯಾರು ಎಂಬ ಚರ್ಚೆ ನಡೆದಿದೆ.
ಈ ವರ್ಷ ಐಪಿಎಲ್ ಗೆ ಆಟಗಾರರ ಮೆಗಾ ಹರಾಜು ನಡೆಯಲಿದ್ದು, ಕೆಎಲ್ ರಾಹುಲ್ ಮತ್ತೆ ಆರ್ ಸಿಬಿ ಸೇರಿಕೊಂಡು ಅವರು ತಂಡದ ಚುಕ್ಕಾಣಿ ಹಿಡಿಯಬಹುದು ಎಂಬ ಮಾತು ಕೇಳಿಬರುತ್ತಿತ್ತು. ಅದರ ಬೆನ್ನಲ್ಲೇ ಡೆಲ್ಲಿ ಮಾಜಿ ನಾಯಕ ಶ್ರೇಯಸ್ ಐಯರ್ ಹೆಸರೂ ಕೇಳಿಬರುತ್ತಿದೆ.
ಶ್ರೇಯಸ್ ಕೂಡಾ ಮುಂದಿನ ಆವೃತ್ತಿ ವೇಳೆಗೆ ಹರಾಜು ಪ್ರಕ್ರಿಯೆಗೊಳಪಡಲಿದ್ದು, ಅವರು ಆರ್ ಸಿಬಿ ಕೂಡಿಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಈಗ ಆರ್ ಸಿಬಿ ನಾಯಕತ್ವಕ್ಕೆ ರಾಹುಲ್ ಮತ್ತು ಶ್ರೇಯಸ್ ನಡುವೆ ಫೈಟ್ ಏರ್ಪಟ್ಟಿದೆ.